ಕುಮಾರಧಾರ ನದಿಯಲ್ಲಿ ಸತ್ತು ತೇಲುತ್ತಿರುವ ಮೊಸಳೆ:ಕಲುಷಿತಗೊಂಡ ನದಿ ನೀರೇ ಜಲಚರಗಳ ಸಾವಿಗೆ ಕಾರಣ ಶಂಕೆ.

ಕುಮಾರಧಾರ ನದಿಯಲ್ಲಿ ಸತ್ತು ತೇಲುತ್ತಿರುವ ಮೊಸಳೆ:ಕಲುಷಿತಗೊಂಡ ನದಿ ನೀರೇ ಜಲಚರಗಳ ಸಾವಿಗೆ ಕಾರಣ ಶಂಕೆ.

 ಕುಮಾರಧಾರ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಜಲಚರಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಇದೀಗ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆ ಅಡಿಯಲ್ಲಿ ಮೊಸಳೆಯೊಂದು ಸತ್ತು  ಬಿದ್ದಿರುವ ಘಟನೆ ವರದಿಯಾಗಿದೆ.

ಈ ಸೇತುವೆ ಅಡಿ ಭಾಗದಲ್ಲಿ ಕುಮಾರಧಾರ ನದಿ ಹರಿಯುತ್ತಿದ್ದು  ನೀರು ಕಲುಷಿತಗೊಂಡು ಜಲಚರಗಳು ಸಹಿತ ಮೊಸಳೆ ಸತ್ತು ಹೋಗಿದೆ ಎನ್ನಲಾಗುತ್ತಿದೆ.

ಈ ನದಿಯಲ್ಲಿ ನೀರಿನ ಹರಿವು ನಿಂತಿದ್ದು ಅಲ್ಲಲ್ಲಿ ನೀರು ನಿಂತಿದೆ. ನಿರೀನ ಅಭಾವದಿಂದಲೇ ಸತ್ತಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ . ಇನ್ನುಸಿಹಿ ನೀರಿನ  ಮೀನು ಹಿಡಿಯಲು ಕೆಲವರು ಕೆಮಿಕಲ್ ಮಿಶ್ರಿತ ದ್ರಾವಣ ಹಾಕುತ್ತಿರುವ  ಸುದ್ದಿಯೂ ಹರಡಿದ್ದು ಇದರಿಂದ ಜಲಚರಗಳಿಗೆ ಮಾರಕವಾಗಿದೆ .

ಸೇತುವೆ ಕೆಲ ಭಾಗದ ಸುಮಾರು 200 ಮೀ ಅಂತರದಲ್ಲಿ ನಾಕೂರು ಗಯವಿದ್ದು ಅಲ್ಲಿ ಮಹಷಿರ್ ಜಾತಿಯ ದೇವರ ಮೀನುಗಳ ಸಮೂಹವೇ ಇದೆ .ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

ರಾಜ್ಯ