ಮೈತ್ರಿ ಬೆನ್ನಲ್ಲೆ ಕಾಂಗ್ರೇಸ್ ಪಕ್ಷದತ್ತ ಜೆ.ಡಿ.ಎಸ್ ಬೆಂಬಲಿತರ ವಲಸೆ ಆರಂಭ:ಪಂಜದಲ್ಲಿ ಜೆ ಡಿ ಎಸ್ ಯುವ ನಾಯಕ ಪ್ರವೀಣ್ ಮುಂಡೋಡಿ ಕಾಂಗ್ರೇಸ್ ಸೇರ್ಪಡೆ.

ಮೈತ್ರಿ ಬೆನ್ನಲ್ಲೆ ಕಾಂಗ್ರೇಸ್ ಪಕ್ಷದತ್ತ ಜೆ.ಡಿ.ಎಸ್ ಬೆಂಬಲಿತರ ವಲಸೆ ಆರಂಭ:ಪಂಜದಲ್ಲಿ ಜೆ ಡಿ ಎಸ್ ಯುವ ನಾಯಕ ಪ್ರವೀಣ್ ಮುಂಡೋಡಿ ಕಾಂಗ್ರೇಸ್ ಸೇರ್ಪಡೆ.

ಲೋಕ ಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಜೆ.ಡಿ .ಎಸ್ ಮೈತ್ರಿ ಬೆನ್ನಲ್ಲೇ ಜೆಡಿ ಎಸ್ ನ ತಳಮಟ್ಟದ ನಾಯಕರಲ್ಲಿ  ಅಸಮಧಾನ ಬುಗಿಲೆದ್ದಿದ್ದು ಹಲವರು ಕಾಂಗ್ರೇಸ್ ಕೈ ಬದ್ರ ಪಡಿಸಲು ವಲಸೆ ಆರಂಭಿಸಿದ್ದಾರೆ. ಅದರಂತೆ ಸುಳ್ಯದಲ್ಲೂ ಜೆ ಡಿ ಎಸ್ ಯುವ ನಾಯಕ ಪ್ರವೀಣ್ ಮುಂಡೋಡಿ ಇಂದು ಕಾಂಗ್ರೇಸ್ ಸೇರ್ಪಡೆಗೊಂಡಿದ್ದಾರೆ, ಕಳೆದ ಲೋಕ ಸಭಾ ಚುನಾವಣೆಯಲ್ಲಿ ಜೆ ಡಿ ಎಸ್  ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಜೊತೆ ಕೈ ಜೋಡಿಸಿ ಮತಕೇಳಿದ್ದೆವು , ಈಗ ಮತ್ತೆ ಬಿಜೆಪಿ ಅಭ್ಯರ್ಥಿ ಜೊತೆಗೂಡಿ ಮತಯಾಚನೆ ಮಾಡುವದು ಸಾಧ್ಯವಿಲ್ಲ, ಹಾಗೂ ಕಾಂಗ್ರೇಸ್ ರಾಜ್ಯದಲ್ಲಿ ಅಭಿವೃದ್ದಿ ಪರ ಆಡಳಿತ ನಡೆಸುತ್ತಿದ್ದು ಮೆಚ್ಚಿ  ಕಾಂಗ್ರೇಸ್ ಸೇರ್ಪಡೆಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಮುಂದೆ ಹಲವು ಮಂದಿ ಕಾಂಗ್ರೇಸ್ ಸೇರ್ಪಡೆಯಾಗುವ ಸುಳಿವು  ನೀಡಿದ್ದಾರೆ.

ಇಂದು  ಅವರನ್ನು ಪಂಜದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಹಾಗೂ  ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಅವರು ಪಕ್ಷದ ಶಾಲು ಹೊದಿಸಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿದರು.

ರಾಜ್ಯ