ಸುರತ್ಕಲ್ : ಆಟೊ ಚಾಲಕನಿಗೆ ಹಲ್ಲೆ, ಕೊಲೆ ಬೆದರಿಕೆ; ಪ್ರಕರಣ ದಾಖಲು

ಸುರತ್ಕಲ್ : ಆಟೊ ಚಾಲಕನಿಗೆ ಹಲ್ಲೆ, ಕೊಲೆ ಬೆದರಿಕೆ; ಪ್ರಕರಣ ದಾಖಲು

ಸುರತ್ಕಲ್: ತಂಡವೊಂದು ರಾತ್ರಿ ಹೊತ್ತು ಸಾರ್ವಜನಿಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿರುವುದು ಅಲ್ಲದೆ, ಆಟೊ ಚಾಲಕನಿಗೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಕಳವಾರಿನ ಆಶ್ರಯ ಕಾಲನಿ ಬಳಿ ವರದಿಯಾಗಿದೆ.

ಎ.9ರಂದು ರಾತ್ರಿ ಆಟೊ ಚಾಲಕ ಅಝರುದ್ದೀನ್‌ ಎಂಬವರು ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಳವಾರಿನ ಆಶ್ರಯ ಕಾಲನಿ ಅಂಗನವಾಡಿಯ ಬಳಿ ಪ್ರಶಾಂತ್ ಕಳವಾರು, ಗಣೇಶ, ಪುನೀತ್ ಹಾಗೂ ಇತರರು ರಸ್ತೆಯಲ್ಲಿ ಅಡ್ದ ಮಲಗಿ, ರಸ್ತೆ ಸಂಚಾರಕ್ಕೆ ತಡೆಯಾಗಿದ್ದಾರೆ.ಈ ವೇಳೆ ಆರೋಪಿಗಳ ಪೈಕಿ ಪ್ರಶಾಂತ್ ಹಾಗೂ ಗಣೇಶ್ ಎಂಬವರು ಅಝರುದ್ದೀನ್‌ ಅವರನ್ನು ತಡೆದು ನಿಲ್ಲಿಸಿ ಕುತ್ತಿಗೆಗೆ ಹಾಗೂ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ಬಳಿಕ ಅವರ ಜೊತೆ ಇದ್ದ ಇಬ್ಬರು ಯುವಕರು ಕೂಡಾ ಹಲ್ಲೆ ಮಾಡಿದ್ದು, ಪ್ರಶಾಂತ ಹಾಗೂ ಮತ್ತೋರ್ವ ಯುವಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಿಕ್ಷಾ ಚಾಲಕ ಅಝರುದ್ದೀನ್‌ ಅವರು ಸುರತ್ಕಲ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಈ ಸಂಬಂಧ ಸುರತ್ಕಲ್‌ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಜ್ಯ