

ಜಾತ್ರೋತ್ಸವದ ಪ್ರಯುಕ್ತ ಕ್ರೀಡಾ ಕಾರ್ಯಕ್ರಮದ ಅಂಗವಾಗಿ ಎ.9ರ ರಾತ್ರಿ ದೇವಾಲಯದ ಮುಂಭಾಗದಲ್ಲಿ ಪೆರಾಜೆಯ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ಪ್ರಾಯೋಜಕತ್ವದಲ್ಲಿ ನಡೆದ 32ನೇ ವರ್ಷದ ಹೊನಲು ಬೆಳಕಿನ ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಪೆರಾಜೆಯ ಅಗ್ನಿ ಯುವಕ ಮಂಡಲ ಬಂಟೋಡಿ ಪ್ರಥಮ ಹಾಗೂ ಎನ್.ಎಂ.ಸಿ. ಸುಳ್ಯ ದ್ವಿತೀಯ ಸ್ಥಾನ ಪಡೆದುಕೊಂಡಿತು. ತೃತೀಯ ಎನ್. ಎಂ.ಸಿ “ಬಿ” ತಂಡ ಹಾಗೂ ಚತುರ್ಥ ಬಹುಮಾನವನ್ನು ಪೀಚೆ ಕುಟುಂಬಸ್ಥರ ತಂಡ ಪಡೆದುಕೊಂಡಿತು.




