ಒಂದು ತಿಂಗಳ ಕಾಲ ನಡೆದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಸಂಪನ್ನ:ಮಹಾವಿಷ್ಣುಮೂರ್ತಿ ದೈವದ ಮೇಲೇರಿ ಪ್ರವೇಶವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು.

ಒಂದು ತಿಂಗಳ ಕಾಲ ನಡೆದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಸಂಪನ್ನ:ಮಹಾವಿಷ್ಣುಮೂರ್ತಿ ದೈವದ ಮೇಲೇರಿ ಪ್ರವೇಶವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು.

ಇತಿಹಾಸ ಪ್ರಸಿದ್ದ , ಬಹು ಕಾರಣಿಕ ಕ್ಷೇತ್ರವಾಗಿರುವ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಎ.10 ರಂದು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮತ್ತು ರುದ್ರ ಚಾಮುಂಡಿ ದೈವದ ಕೋಲ  ನಡೆಯುವುದರೊಂದಿಗೆ ಸತತ ಒಂದು ತಿಂಗಳ ಕಾಲ ನಡೆದ  ಕಾಲಾವಧಿ ಜಾತ್ರೋತ್ಸವ ಸಂಪನ್ನಗೊಂಡಿದೆ. ಮಾ.9ರಿಂದ ಮೊದಲ್ಗೊಂಡು  ಎ.10ರ ತನಕ ಒಂದು ತಿಂಗಳ ಕಾಲ  ಜಾತ್ರೋತ್ಸವ ನಡೆಯುವುದು ಪೆರಾಜೆ ಜಾತ್ರೋತ್ಸವದ ವಿಶೇಷತೆಯಲೊಂದು ಇಲ್ಲಿಯ ಭಗವತಿ ದೊಡ್ಡಮುಡಿ, ಕರಿಭೂತ ಕೋಮಾಳಿ ಹಾಗೂ ಮಹಾವಿಷ್ಣುಮೂರ್ತಿ ದೈವದ ಮೇಲೇರಿ ಪ್ರವೇಶವನ್ನು ವೀಕ್ಷಿಸಲು ದೂರದೂರಿನ ಸಾವಿರಾರು ಭಕ್ತರು ಆಗಮಿಸಿದ್ದರು.ನಿನ್ನೆ ಎ.9ರಂದು ರಾತ್ರಿ ಒತ್ತೆಕೋಲ ಕೂಡಿ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ,ನಡೆದು ರಾತ್ರಿ12 ಗಂಟೆಗೆ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಿತು. ಎ.10ರಂದು  ಬೆಳಿಗ್ಗೆ 6.30 ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಮೇಲೇರಿ ಪ್ರವೇಶ ನಡೆಯಿತು. ವಿಷ್ಣುಮೂರ್ತಿ ಮತ್ತು ರುದ್ರ ಚಾಮುಂಡಿ ದೈವಗಳನ್ನು ಕಂಡು ಭಕ್ತ ಸಮೂಹ ಪುನೀತರಾದರು. ಬಳಿಕ ಮಾರಿಕಳ ನಡೆಯಿತು.ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ,ದೇವತಕ್ಕರಾದ ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದಭಾಸ್ಕರ ಕೋಡಿ, ವಿಶ್ವನಾಥಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ ಪುರುಷೋತ್ತಮ ನಿಡ್ಯಮಲೆ.ಆಡಳಿತ ಸಮಿತಿ ಸದಸ್ಯರುಗಳು, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಮುಖಂಡರು, ಅರ್ಚಕ ವೃಂದ ಮತ್ತು ಸಿಬ್ಬಂದಿವರ್ಗ ಹಾಗೂ ಊರ ಪರವೂರ ಭಗವದ್ಭಕ್ತರು ಇದ್ದರು.

ರಾಜ್ಯ