ಮಂಗಳೂರಿ : ರೈಲಿನಡಿಗೆ ಬಿದ್ದು ಗುತ್ತಿಗಾರಿನ ಯುವಕ  ಮೃತ್ಯು

ಮಂಗಳೂರಿ : ರೈಲಿನಡಿಗೆ ಬಿದ್ದು ಗುತ್ತಿಗಾರಿನ ಯುವಕ ಮೃತ್ಯು

ಎ. 07 ರಂದು ಮಂಗಳೂರಿನಲ್ಲಿ ಗುತ್ತಿಗಾರು ಗ್ರಾಮದ ಆಚಳ್ಳಿ ಯುವಕನೋರ್ವ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಗುತ್ತಿಗಾರು ಗ್ರಾಮದ ಆಚಳ್ಳಿ ಹಂದಿಪಾರೆ ನಿವಾಸಿ ಸುಪ್ರೀತ್ ನಾಯ್ಕ ರವರು ಮೃತಪಟ್ಟ ದುರ್ದೈವಿ. ತನ್ನ ತಾಯಿ ಹಾಗೂ ಅಕ್ಕನೊಂದಿಗೆ ಮಂಗಳೂರಿನಲ್ಲಿ ನೆಲೆಸಿರುವ ಈತ ಎ.6 ರಂದು ರಾತ್ರಿ ವೇಳೆ ಮನೆಯಿಂದ ಹೋಟೆಲ್ ಗೆಂದು ಬಂದಿದ್ದ, ಸ್ವಲ್ಪ ಹೊತ್ತಿನ ಬಳಿಕ ಮನೆಯವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಹಿತಿ ಬಂದಿದೆ. ಕಾಲು ಹಾಗೂ ಕೈ ತುಂಡಾಗಿದ್ದರಿಂದ ರಕ್ತಸ್ರಾವ ಹೆಚ್ಚಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಮೃತಪಟ್ಟರು ಎಂದು ತಿಳಿದು ಬಂದಿದೆ.

ರಾಜ್ಯ