ಎ.9 ಪೆರಾಜೆಯಲ್ಲಿ ಹೊನಲು ಬೆಳಕಿನ  ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ.ಯುವ ಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘ (ರಿ)    ನಿರಂತರವಾಗಿ 32 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ  ಕಬಡ್ಡಿ ಪಂದ್ಯಾಟ.

ಎ.9 ಪೆರಾಜೆಯಲ್ಲಿ ಹೊನಲು ಬೆಳಕಿನ  ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ.ಯುವ ಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘ (ರಿ)    ನಿರಂತರವಾಗಿ 32 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ  ಕಬಡ್ಡಿ ಪಂದ್ಯಾಟ.

 ಪೆರಾಜೆ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಯುವಶಕ್ತಿ  ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘ (ರಿ) ಕಳೆದ 31 ವರ್ಷಗಳಿಂದ ಕಬಡ್ಡಿ ಪಂದ್ಯಾಟವನ್ನು ನಿರಂತರವಾಗಿ    ಪೆರಾಜೆಯ ಶಾಸ್ತಾವು ದೇವಸ್ಥಾನದ  ಮುಂಭಾಗದಲ್ಲಿ  ನಡೆಸಿಕೊಂಡು ಬರುತ್ತಿದ್ದು  ಈ ಬಾರಿಯೂ ಎ.9 ರ ಮಂಗಳವಾರದಂದು 32 ನೇ ವರ್ಷದ ಹೊನಲು ಬೆಳಕಿನ  ಸಾರ್ವಜನಿಕ ಪುರುಷರ  ಮುಕ್ತ  ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿದೆ. ಈ  ಪಂದ್ಯಾ ಕೂಟದಲ್ಲಿ  ಭಾಗವಹಿಸುವ ತಂಡಗಳಿಗೆ  ಪ್ರಥಮ ಬಹುಮಾನವಾಗಿ 15,000 ನಗದು ಮತ್ತು ಶಾಶ್ವತ ಫಲಕ, ದ್ವಿತೀಯ  ಬಹುಮಾನವಾಗಿ 10,000 ನಗದು ಮತ್ತು ಶಾಶ್ವತ ಫಲಕ, ಹಾಗೂ ತೃತೀಯ ಬಹುಮಾನವಾಗಿ 5000 ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು ಅಲ್ಲದೆ ಉತ್ತಮ ದಾಳಿಗಾರ , ಉತ್ತಮ ಹಿಡಿತಗಾರ, ಸರ್ವಾಂಗೀಣ ಆಟಗಾರರಿಗೆ   ವೈಯುಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು  ಕ್ರೀಡಾ ಕೂಟದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳು ಕೂಡಲೇ  9449933454 / 7022211133  / 9900742787 / 9483317928 / 9743103904 / ಸಂಖ್ಯೆಗೆ ಸಂಪರ್ಕಿಸಿ ಪ್ರವೇಶ ಶುಲ್ಕ ನೀಡಿ   ತಂಡವನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.

ಕ್ರೀಡೆ