
ಕರಾವಳಿ ರಾಜಕೀಯದಲ್ಲಿ ತಲ್ಲಣ ಶುರುವಾಗಿದೆ, ದೇಶದ ಪ್ರಮುಖ ರಾಷ್ಟ್ರೀ ಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೇಸ್ ತೀವ್ರ ಸ್ಪರ್ಧೆಯ ಮುನ್ಸೂಚನೆಯನ್ನು ನೀಡಿದೆ, ಹಾಗೆಂದು ದಕ್ಷಿಣ ಕನ್ನಡ ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಾಲಿನ ಭದ್ರ ಕೋಟೆ..ಇಲ್ಲಿ ಕಾಂಗ್ರೇಸ್ ಕಳೆದ ಕೆಲವು ವರ್ಷಗಳಿಂದ ಪ್ರತೀ ಬಾರಿಯೂ ಸೋಲನ್ನು ಕಂಡಿದೆ.ಇದಕ್ಕೆ ಕೆಲವೊಮ್ಮೆ ಕಾಂಗ್ರೇಸ್ ಅಭ್ಯರ್ಥಿಯ ಆಯ್ಕೆಯಲ್ಲಿಯೇ ಎಡವಟ್ಟು ಸಾಮಾನ್ಯವಾಗಿತ್ತು,ಅಲ್ಲದೆ ಪಕ್ಷದಲ್ಲಿನ ಆಂತರಿಕ ಕಲಹ, ನಾಯಕತ್ವದ ಪೈಪೋಟಿ, ಪಕ್ಷದ ನಾಯಕರಲ್ಲಿ ಮೊನಚಿಲ್ಲದ ಸ್ಪರ್ದಾ ಭಾವನೆ ಇವೆಲ್ಲವೂ ಕಾಂಗ್ರೇಸ್ ಸೋಲಿಗೆ ಕಾರಣವಾಗಿತ್ತು,ಆದರೆ ಅಧಿಕಾರಕ್ಕಾಗಿ ಹೇಗಾದರೂ ಗೆಲ್ಲಲೇ ಬೇಕು ಎನ್ನುವ ತುಡಿತದೊಂದಿಗೆ ಸಂಕಲ್ಪ ತೊಟ್ಟಿದ್ದ ಬಿಜೆಪಿ ತನ್ನ ಸಂಘಟಿತ ಪ್ರಯತ್ನದಿಂದ ಲೀಲಾ ಜಾಲವಾಗಿ ಗೆಲುವಿನ ಹೆಜ್ಜೆ ಇಡುತ್ತಲೇ ಬಂದಿದೆ. ಆದರೆ ಈ ಬಾರಿ ಕರಾವಳಿಯಲ್ಲೂ ಜಾತಿ ಲೆಕ್ಕಾಚಾರ ಮಾತುಗಳು ಕೇಳಿ ಬಂದಿದೆ.

ಹೌದು … ರಾಜ್ಯದ ಬೇರೆ ಬೇರೆ ಭಾಗದಲ್ಲಿ ಜಾತಿ ಲೆಕ್ಕಚಾರದಲ್ಲಿ ಅಭ್ಯರ್ಥಿಗಳ ಆಯ್ಕೆ, ಮತದಾನ, ಹಾಗೂ ಗೆಲುವು ನಡೆಯುತ್ತಿದ್ದರೂ ಕರಾವಳಿಯಲ್ಲಿ ಮಾತ್ರ ಇಲ್ಲಿವರೆಗೆ ಜಾತಿ ಲೆಕ್ಕಾಚ್ಚಾರ ಕೇಳಿ ಬಂದಿರಲಿಲ್ಲ, ಸಂಘಟನೆ ಮತ್ತು ಜಾತಿಗೂ ಮೀರಿದ ಪಕ್ಷ ಪ್ರೇಮವೇ ಗೆಲ್ಲುತ್ತಿತ್ತು ಮತ್ತು ಗೆಲ್ಲುಸುತ್ತಿತ್ತು..ಇಲ್ಲಿ ಬಿಲ್ಲವ ಮತದಾರರ ಸಂಖ್ಯೆ ಅತೀ ಹೆಚ್ಚು, ಹೆಚ್ಚು ಅಂದರೆ ಕೇವಲ ಹೆಚ್ಚಲ್ಲ. ಬೇರೆ ಕ್ಷೇತ್ರಕ್ಕೆ ಹೋಲಿಸಿದರೆ ಒಟ್ಟು ಮತದಾರರಿಗಿಂತಲೂ ಹೆಚ್ಚು .ಅಂದರೆ ಈ ಬಾರಿಯ ಚುನಾವಣೆಯಲ್ಲಿ ಬಿಲ್ಲವ ಸಮುದಾಯದ ಮತ ಬರೋಬ್ಬರಿ 4,29,000 ಮತಗಳಿವೆ, ಬಿಲ್ಲವ ಸಮುದಾಯಲ್ಲಿ ಈ ಭಾಗದ ಹಿರಿಯ ಮುಂಚೂಣಿ ನಾಯಕರೆಂದರೆ ಜನಾರ್ಧನ ಪೂಜಾರಿಯವರೇ ಆಗಿದ್ದಾರೆ.ಆದರೂ ಮತದಾನ ವಿಚಾರಕ್ಕೆ ಬಂದಾಗ ಬಿಲ್ಲವ ಸಮುದಾಯದ ಬಹುತೇಕರು ಬಿಜೆಪಿ ಬೆಂಬಲಿತರೇ ಆಗಿದ್ದರು.., ಆದರೆ ಇತ್ತೀಚೆಗೆ ಪಕ್ಷಕ್ಕಾಗಿ ಸರ್ವವನ್ನು ಅರ್ಪಿಸಿ ಕೊಂಡಿದ್ದ ಶರತ್ ಪೂಜಾರಿ , ಪ್ರವೀಣ್ ನೆಟ್ಟಾರು ಭೀಷಣವಾಗಿ ಕೊಲೆಯಾದ ಬಳಿಕ ಬಿಲ್ಲವರೇ ಸ್ವ ಪಕ್ಷದ ವಿರುದ್ದ ತಿರುಗಿ ಬಿದ್ದಿದ್ದರು, ಬಳಿಕ ನಡೆದ ವಿದ್ಯಾಮಾನದಲ್ಲಿ ಬಿಜೆಪಿ ಅವರ ಕುಟಂಬ ವರ್ಗದ ನೆರವಿಗೆ ಧಾವಿಸಿ ಹೆಗಲು ಕೊಟ್ಟು ನಿಂತಿದ್ದರೂ …ಒಂದಷ್ಟು ಬಿಲ್ಲವರ ಮನದಲ್ಲಿ ಈಗಲೂ ಒಂದಷ್ಟು ಮುನಿಸು ಇದ್ದೇ ಇದೆ.
ಮತ್ತು ಬಿಲ್ಲವರು ಇದೀಗ ಜಿಲ್ಲೆಯಲ್ಲಿ ಸಂಘಟಿತರಾಗಿರುವುದೂ ಸತ್ಯ, ಇದನ್ನೇ ಗಮನದಲ್ಲಿರಿಸಿ ಕಾಂಗ್ರೇಸ್ ಈ ಬಾರಿ ತನ್ನ ಅಭ್ಯರ್ಥಿಯಾಗಿ ಬಿಲ್ಲವ ಸಮುದಾಯದ ಪದ್ಮರಾಜ್ ರವರನ್ನು ನಿಲ್ಲಿಸಿ ಬಿಲ್ಲವರ ಮತ ಸೆಳೆಯಲು ಭಾರೀ ಪ್ಲಾನ್ ಮಾಡಿಕೊಂಡಿದೆ.ಆದರೆ ಇದರಲ್ಲಿ ಇವರ ಪ್ರಯತ್ನ ಹೇಗೆ ಸಫಲವೋ ಕಾದು ನೋಡಬೇಕಾಗಿದೆ.ಇವರಿಗೆ ಸವಾಲಾಗಿ ಬಿಜೆಪಿ ಬಂಟ ಸಮುದಾಯದ ಬ್ರಿಜೇಶ್ ಚೌಟರನ್ನು ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಸಿದ್ದಾರೆಇಲ್ಲಿ ಬಂಟ ಸಮುದಾಯದ 2,03,000 ಮತದಾರರಿದ್ದಾರೆ.
ಇಲ್ಲಿ ಬಂಟ ಸಮುದಾಯದ ಬಹುಪಾಲು ಮತಗಳು ಚೌಟರ ಬಗಲಿಗೆ ಬೀಳಬಹುದಾಗಿದೆ, ಆದರೂ ಬಂಟ ಸಮುದಾಯದಲ್ಲೂ ಕಾಂಗ್ರೇಸ್ ನ ಪ್ರಭಲ ನಾಯಕರು ಇದ್ದಾರೆ, ಹಾಗಾಗಿ ಈ ನಾಯಕರ ವರ್ಚಸ್ಸು ಕೆಲಸ ಮಾಡಿದರೆ, ಕಾಂಗ್ರೇಸಿಗೂ ಬಂಟರ ಮತಗಳಲ್ಲಿ ಪಾಲು ಪಡೆಯಬಹುದಾಗಿದೆ.ದಕ್ಷಿಣ ಕನ್ನಡದಲ್ಲಿ ಒಟ್ಟು 17,96,826 ಮತದಾರರಿದ್ದಾರೆ. ಈ ಪೈಕಿ 9,19,321 ಮಹಿಳಾ ಮತದಾರರು 8,77,438 ಪುರುಷ ಮತದಾರರಿದ್ದಾರೆ , ಇದರಲ್ಲಿ ಮುಸ್ಲಿಂ ಮತದಾರರು,3,90,000 ಮಂದಿ ಹಾಗೂ ಕ್ರೈಸ್ತ ಮತದಾರರು 1,56,000, ಮಂದಿ ಇದ್ದಾರೆ, ಇವರಲ್ಲಿ ಬೆರಳೆಣಿಕೆಯ ಮತವಷ್ಟೇ ಬಿಜೆಪಿಗೆ ಸಿಗಬಹುದು, ಹಾಗಾಗಿ ಕಾಂಗ್ರೇಸಿಗೆ ಇವರೇ ಬಲು ದೊಡ್ಡ ಅಸ್ತ್ರವೂ ಹೌದು, ಇನ್ನು ಜಿಲ್ಲೆಯಲ್ಲಿ ಒಳಗೊಳಗೆ ಕೊತ ಕೊತ ಕುದಿಯುತ್ತಿರುವ ಎರಡನೇ ದೊಡ್ಡ ಸಮುದಾಯ ಒಕ್ಕಲಿಗರದು, ಒಕ್ಕಲಿಗ ಮತದಾರರ ಸಂಖ್ಯೆಯೇ ಬರೋಬರಿ 3,02,000 ವಿದೆ, ಹಿಂದೆ ಒಕ್ಕಲಿಗರು ವಿಧಿಯಿಲ್ಲದೇ ಪಾಲಿಗೆ ಬಂದದ್ದು ಪಂಚಾಂಬೃತವೆಂದು ಸುಮ್ಮನಿರುತ್ತಿದ್ದರು,ಆದರೆ ಸೌಜನ್ಯ ಪ್ರಕರಣದ ಕಿಡಿ ಒಕ್ಕಲಿಗರ ಒಳಗೆ ಹಾಗೇ ಬೂದಿ ಮುಚ್ಚಿದ ಕೆಂಡದಂತೆ ಹಾಗೇ ಇದೆ, ಅದಕ್ಕಾಗಿ ಒಂದಷ್ಟು ಮಂದಿ ಎರಡೂ ಪಕ್ಷಗಳ ಮೇಲೆ ಮುನಿಸಿಕೊಂಡಿದ್ದು, ನೂಟಾ ಅಭಿಯಾನಕ್ಕೂ ಮುಂದಾಗಿದ್ದಾರೆ, ಅದೇನೇ ಇರಲಿ ಒಕ್ಕಲಿಗ ಬಹುತೇಕ ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದು ಕೃಷಿಯಲ್ಲೇ ತಲ್ಲೀನವಾಗಿರುವ ಮಂದಿ , ಇವರ ವಿಶ್ವಾಸವನ್ನು ಯಾವ ಪಕ್ಷ ಹೇಗೆ ಪಡೆದು ಕೊಳ್ಳುತ್ತದೋ, ಯಾವ ಆಮಿಷ ಒಡ್ಡುತ್ತಾರೋ ಅದರ ಮೇಲೆ ಒಕ್ಕಲಿಗರ ಮತ ಚಲಾವಣೆ ನಡೆಯಲಿದೆ. ಇವರ ಮತಗಳು ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಚಾರದಲ್ಲಿ ಪ್ರಮಖ ಪಾತ್ರ ವಹಿಸಲಿದೆ.
ಇನ್ನೂ ದಲಿತ ಮತದಾರರ ಸಂಖ್ಯೆ 1 ,55,000 , ಬ್ರಾಹ್ಮಣ ಮತದಾರರ ಸಂಖ್ಯೆಯೂ 1.07,000 ರಷ್ಟು ಹಾಗೂ ಇತರೆ 54,826 ಮತಗಳು ಇದ್ದು ಇವರ ಮತಗಳು ಅಭ್ಯರ್ಥಿಗಳ ಗೆಲುವು ಸೋಲುಗಳ ಅಂತರವನ್ನು ಕಡಿಮೆ ಮಾಡಲು ಎರಡೂ ಪಕ್ಷಗಳು ಸರ್ಕಸ್ ಮಾಡಬೇಕಾಗಿದೆ, ಒಟ್ಟಿನಲ್ಲಿ ಈ ಭಾರಿಯ ದಕ್ಷಿಣ ಕನ್ನಡದ ಚುನಾವಣೆಗೆ ಜಾತಿ ಲೆಕ್ಕಚಾರ ಸೇರಿಕೊಂಡಿದ್ದು, ಇದು ಈ ಭಾರೀಯ ಚುನಾವಣೆಯನ್ನು ರಂಗೇರಿಸಿದೆ.ಹಾಗಾಗಿ ಇವೆಲ್ಲಾ ಲೆಕ್ಕಚಾರವನ್ನು ನೋಡಿದರೆ ಇಲ್ಲಿ ಬಿಲ್ಲವ ಮತ್ತು ಒಕ್ಕಲಿಗರ ಮತವೇ ನಿರ್ಣಾಯಕ ಸತ್ಯ.. ಯಾವ ಪಕ್ಷಕ್ಕೂ ಸುಲಭ ಜಯ ಸಿಗಲಾರದು.ಒಟ್ಟಿನಲ್ಲಿ ರಾಜಕೀಯ.. ಸ್ಫರ್ಧೆಯಾಗಬೇಕೇ ವಿನಹ ಯುದ್ದವಲ್ಲ , ಸೋಲು ಗೆಲವು ಇರುಂವತದ್ದೆ ,ದ್ವೇಷದಿಂದ ಸಾಮರಸ್ಯ ಹದಗೆಡದಂತೆ, ಪಕ್ಷಕ್ಕೂ ಮೀರಿ ದೇಶೀಯತೆ ಉಳಿಸಿ ಭಾಂದವ್ಯ ಮೆರೆಯುವುದೇ ನಿಜವಾದ ರಾಜಕೀಯ.
