
ಸುಳ್ಯದ ಜ್ಯೂನಿಯರ್ ಕಾಲೇಜು ಸಮೀಪ ಮಲ್ಲಿಕಾ ಕಾಂಪ್ಲೆಕ್ಸ್ ನಲ್ಲಿ ಸುಳ್ಯದ ಇಂಜಿನಿಯರಿಗ್ ಯುವಕರಾದ ತಕ್ಷಿತ್ ಕನ್ನಡ್ಕ ಮತ್ತು ಸಕೇಶ್ ಕುತ್ತಿಮುಂಡ ಮಾಲಕತ್ವದ ಏಷ್ಯನ್ ಫೈಂಟ್ಸ್ ಅಧಿಕೃತ ಸಂಸ್ಥೆ ಶ್ರೀ ಮಹಾವಿಷ್ಣು ಎಂಟರ್ ಪ್ರೈಸಸ್ ಸುಳ್ಯದಲ್ಲಿ ಎ.5 ರಂದು ಶುಭಾರಂಭಗೊಂಡಿತು.


ಸುಳ್ಯದ ಹಿರಿಯ ಇಂಜಿನಿಯರ್ ಸುಮಿತ್ರ ಡಿ .ಎಂ ಹಾಗೂ ಮೈಸೂರಿನ ನವೀನ್ ಎಂ .ಎಸ್. ದೀಪ ಪ್ರಜ್ವಲನ ಗೊಳಿಸಿ ಉದ್ಘಾಟಿಸಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಮುಖ್ಯ ಅತಥಿಗಳಾಗಿ ಇಂಜಿನಿಯರಿಂಗ್ ಅಸೋಸಿಯೇಷನ್ ಸುಳ್ಯ ಇದರ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ,ಸುಳ್ಯ ವರ್ತಕ ಸಂಘದ ಅಧ್ಯಕ್ಷ ಸುದಾಕರ ರೈ , ಕಾರ್ಮಿಕ ಮುಖಂಡ ವಿಶ್ವನಾಥ್, ಕಟ್ಟಡ ಮಾಲಕ ರಾಮಚಂದ್ರ ಭಟ್ , ಫೈಂಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಕೆ ಎಲ್ ಜಗದೀಶ್, ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರ ತಂದೆ ಸೋಮಶೇಖರ್ ಕುತ್ತಿಮುಂಡ,ರತ್ನಾವತಿ ಸೋಮಶೇಖರ್, ಪುರುಷೋತ್ತಮ ಕನ್ನಡ್ಕ ಶೀಲಾ ಪುರುಷೋತ್ತಮ , ಸ್ವಾಗತಿಸಿ ಸಂಸ್ಥೆಗೆ ಶುಭ ಹಾರೈಸಿದರು.ಸಂಸ್ಥೆಯಲ್ಲಿ ಪ್ರತಿಷ್ಟಿತ ಸಂಸ್ಥೆ ಏಷ್ಯನ್ ಪೈಂಟ್ಸ್ ಹಾಗೂ ಇತರ ಕಟ್ಟಡ ಸಾಮಾಗ್ರಿಗಳು, ಹಾರ್ಡ್ ವೇರ್ಸ್ ಸಾಮಾಗ್ರಿಗಳು ಮಿತ ಧರದಲ್ಲಿ ದೊರೆಯುತ್ತದೆ,ಎಲ್ಲಾ ತರದ ಕಟ್ಟಡದ ಕನ್ಸಷ್ಟ್ರಕ್ಷನ್ ಕೆಲಸಗಳು,ಮತ್ತು ಕಟ್ಟಡದ ಸ್ಲ್ಯಾಬಗಳಲ್ಲಿ ಉಂಟಾಂಗುವ ಬಿರುಕುಗಳಿಗೆ ಹೋಗಲಾಡಿಸಿ ಮಳೆ ನೀರ ಸೂರುವಿಕೆಯಿಂದ ಮನೆಯ ಚಾವಣಿಯನ್ನು ಅಭಿವೃದ್ದಿ ಪಡಿಸಿ ನೀಡಲಾಗುತ್ತದೆ, ಹಾಗೂ ಇತರೆ ಕಟ್ಟಡ ಕಟ್ಟಡ ಕಟ್ಟಲು ಉಪಯೋಗಿಸಬಲ್ಲ ಸಾಮಾಗ್ರಿಗಳನ್ನು ಭಾಡಿಗೆಯಲ್ಲಿ ನೀಡುವ ಯೋಜನೆ ಸಂಸ್ಥೆ ಮುಂದಿದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

