ಮಗುವಿಗೆ ಎದೆಹಾಲು ಉಣಿಸುವ ವೇಳೆ ಹೆಣ್ಣುಮಗು ಆಕಸ್ಮಿಕವಾಗಿ ಮೃತಪಟ್ಟ ಕಾರಣದಿಂದ ಮಾನಸಿಕವಾಗಿ ನೊಂದ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದಿಂದ ವರದಿಯಾಗಿದೆ.

ಕಡಬ ತಾಲೂಕು ರಾಮಕುಂಜ ಗ್ರಾಮದ ಶ್ರೀಮತಿ ವನಿತಾ (38) ಆತ್ಮಹತ್ಯೆ ಮಾಡಿಕೊಂಡವರು.ವನಿತಾ ಅವರಿಗೆ ಮೂರು ವರ್ಷದ ಗಂಡು ಮಗು ಇದ್ದು, ಮೂರು ತಿಂಗಳ ಹಿಂದೆ 2ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಎದೆ ಹಾಲು ಉಣಿಸುವ ಸಮಯದಲ್ಲಿ ಹೆಣ್ಣು ಮಗುವು ಆಕಸ್ಮಿಕವಾಗಿ ಮೃತಪಟ್ಟಿತ್ತು ಎನ್ನಲಾಗಿದೆ. ಮಗುವಿನ ಸಾವಿನಿಂದ ಮನನೊಂದಿದ್ದ ತಾಯಿ ಮನೆ ಮಂದಿ ಹೊರಗೆ ಹೋಗಿದ್ದ ವೇಳೆ ಮನೆಯ ಒಳಗಿನ ಕೋಣೆಯ ಮರದ ಅಡ್ಡಕ್ಕೆ ಸೀರೆಯನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

