
ಅಮೆರಿಕಾದ ಒರೆಗಾನ್‌ನಲ್ಲಿ ನಡೆದ ಭೀಕರ ರಸ್ತೆ ಅಪಫಾತದಲ್ಲಿ ಭಾರತ ಮೂಲದ ಆರು ವರ್ಷದ ಮಗು ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಗೀತಾಂಜಲು (32) ಹಾಗೂ ಮಗ ಸಾವಿಗೀಡಾದವರು ಎಂದು ಗುರುತಿಸಲಾಗಿದೆ.

ಗೀತಾಂಜಲಿ ಬರ್ತ್‌ಡೇ ಎಂದು ದೇವಸ್ಥಾನಕ್ಕೆ ಹೋಗಿ ಹಿಂದಿರುಗುವಾಗ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸುವಂತೆ ಸೂಚಿಸಿದರೂ ಡ್ರೈವ್ ಮಾಡಿಕೊಂಡು ಹೋದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಅಪಘಾತದಿಂದ ಸುಮಾರು ಐದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪತಿ ನರೇಶ್ ಬಾಬು ಮತ್ತು ಪುತ್ರ ಗಾಯಗೊಂಡಿದ್ದಾರೆ. ಗೀತಾಂಜಲಿ ಅವರ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೀತಾಂಜಲಿ ಆಸ್ಪತ್ರೆಯಲ್ಲಿ ನಿಧ*ನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
