
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು BJP ಪಕ್ಷಕ್ಕೆ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಮಂಡ್ಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಎಲ್ಲ ನನ್ನ ಆಪ್ತರು, ಬೆಂಬಲಿಗರ ಜತೆಗೆ ಚರ್ಚಿಸಿ ಅಳೆದು ತೂಗಿ, ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ.

ಬದಲಾದ ಪರಿಸ್ಥಿತಿಗೆ ತಕ್ಕಂತೆ ನಾವು ಬದಲಾಗಬೇಕು. ನನಗೆ ನನ್ನ ಭವಿಷ್ಯದ ಬಗ್ಗೆ ಚಿಂತನೆಯಿಲ್ಲ. ಬೇರೆ ಕಡೆ ಸ್ಪರ್ಧಿಸುವುದಾದರೆ ಸಾಕಷ್ಟು ಅವಕಾಶಗಳಿದ್ದವು. ಮೋದಿ ಅವರೇ ನನ್ನ ಜತೆ ಖುದ್ದು ಮಾತನಾಡಿದ್ದಾರೆ. ಹೀಗಾಗಿ ದೇಶದ ಭವಿಷ್ಯದ ದೃಷ್ಟಿಯಿಂದ BJP ಸೇರುವುದಾಗಿ ಹೇಳಿದ್ದಾರೆ.
