ಶ್ರದ್ಧಾ ಭಕ್ತಿಯಿಂದ  ಕರಿಕೆಯ ತೋಟಂನ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿನಡೆದ ಮುತ್ತಪ್ಪ ದೇವರ ವೆಳ್ಳಾಟ್ಟ

ಶ್ರದ್ಧಾ ಭಕ್ತಿಯಿಂದ ಕರಿಕೆಯ ತೋಟಂನ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿನಡೆದ ಮುತ್ತಪ್ಪ ದೇವರ ವೆಳ್ಳಾಟ್ಟ

ಸುಳ್ಯ , ಕೊಡಗು , ಮತ್ತು ಕೇರಳ ಗಡಿ ಭಾಗವಾದ ಕರಿಕೆಯ ತೋಟಂ,ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಮಾ.31ರಂದು ಶ್ರೀ ಮುತ್ತಪ್ಪ ದೇವರ ವೆಳ್ಳಾಟ್ಟ ಶ್ರದ್ಧಾಭಕ್ತಿಯಿಂದ ನಡೆಯಿತು.

ಪರಶಿನಿಯ ಪರಶಿವನ ಅಪರೂಪದ ದಿವ್ಯ ಸಾನಿಧ್ಯವಾದ ಕರಿಕೆ ತೋಟಂ ಮುತ್ತಪ್ಪ ದೇವಸ್ಥಾನದಲ್ಲಿ ಮಾ 31ರ ಪ್ರಾತಃ ಕಾಲ 5 ಗಂಟೆಗೆ ಗಣಪತಿ ಹವನ,ಬೆಳಿಗ್ಗೆ 10 ಗಂಟೆಗೆ ಪಯಂಕುಟ್ಟಿ,10.30 ಕ್ಕೆ ದೇವರನ್ನು ಮಲೆ ಇಳಿಸುವುದು, ನಂತರ 11 ಗಂಟೆಯ ನಂತರ ಶ್ರೀ ಮುತ್ತಪ್ಪ ದೇವರ ವೆಳ್ಳಾಟ ಪ್ರಾರಂಭವಾಯಿತು.

ಮದ್ಯಾಹ್ನ ಪ್ರಸಾದ ವಿತರಣೆ , ಅನ್ನಪ್ರಸಾದ ವಿತರಣೆ ನಡೆದು, ಸಂಜೆ ಗಂಟೆ 4 ಕ್ಕೆ,ಶ್ರೀ ದೇವರನ್ನು ಮಲೆ ಏರಿಸುವ ಕಾರ್ಯಕ್ರಮ ನಡೆಯಿತು. ಕರ್ನಾಟಕ ಮತ್ತು ಕೇರಳ ಭಾಗದ ಸಾವಿರಾರು ಭಕ್ತರು ಶ್ರೀ ದೇವರ ವೆಳ್ಳಾಟಕ್ಕೆ ಆಗಮಿಸಿ ಶ್ರೀ ಮುತ್ತಪ್ಪ ದೇವರ ಕೃಪೆಗೆ ಪಾತ್ರರಾದರು ಕರಿಕೆ ತೋಟಂ ಮುತ್ತಪ್ಪ ದೇವಸ್ಥಾನದ ಟ್ರಸ್ಟಿ ಎನ್ ಕೆ ಗಂಗಾಧರ ಸ್ವಾಗತಿಸಿದರು.

.

ರಾಜ್ಯ