
ಕಡಬ: ಆಕ್ಷಿಜನ್ ಸಿಲಿಂಡರ್ ಸಾಗಾಟದ ವಾಹನ ಮತ್ತು ಟೆಂಪೋ ವಾಹನ ನಡುವೆ ಭೀಕರ ಅಪಘಾತ ನಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಆಲಂಕಾರು -ಶಾಂತಿಮೊಗರು ರಸ್ತೆಯ ಬುಡೇರಿಯಾ ಬಳಿ ನಡೆದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ಕೆಪುಳು ನಿವಾಸಿ ದಿನೇಶ ಹಾಗೂ ಕಾಣಿಯೂರು ನಿವಾಸಿ ಸುನೀಲ್ ಎಂದು ಗುರುತಿಸಲಾಗಿದೆ.ಆಲಂಕಾರಿನಿಂದ ಪುತ್ತೂರಿನತ್ತ ಸಾಗುತ್ತಿದ್ದ ಸಿಎನ್ ಜಿ ಸಿಲಿಂಡರ್ ಸಾಗಾಟದ ಲಾರಿ ಮತ್ತು ಕಡಬದತ್ತ ಬರುತ್ತಿದ್ದ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಟೆಂಪೋ ವಾಹನದಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದು ಗಾಯಾಳು ದಿನೇಶ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸುನೀಲ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ.
