ಜಟ್ಟಿಪಳ್ಳ ನಿವಾಸಿಗಳಿಂದ ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ಬಿಂದಿಗೆ, ಬಕೆಟ್ ಹಿಡಿದು ಕುಡಿಯುವ ನೀರಿಗಾಗಿ ಒತ್ತಾಯ.

ಜಟ್ಟಿಪಳ್ಳ ನಿವಾಸಿಗಳಿಂದ ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ಬಿಂದಿಗೆ, ಬಕೆಟ್ ಹಿಡಿದು ಕುಡಿಯುವ ನೀರಿಗಾಗಿ ಒತ್ತಾಯ.

ತಮ್ಮ ವಾರ್ಡಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಸುಳ್ಯದ ಜಟ್ಟಿಪಳ್ಳದ ಕೆಲವು ನಿವಾಸಿಗಳು ಬಿಂದಿಗೆ ಮತ್ತು ಬಕೆಟ್ ಹಿಡಿದು ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ಮಾರ್ಚ್ 27ರಂದು ನಡೆದಿದೆ.

ಸುಳ್ಯ ನಗರ ಪಂಚಾಯತ್ ವತಿಯಿಂದ ಅಳವಡಿಸಲಾಗುತ್ತಿರುವ ಪೈಪ್ ಲೈನ್ ಕಾಮಗಾರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಊರಿನವರು ಅಸಮರ್ಪಕ ಕಾಮಗಾರಿಯಿಂದಾಗಿ ಹಲವು ಮನೆಗಳಿಗೆ ನೀರಿನ ಪೂರೈಕೆ ಆಗಿರುವುದಿಲ್ಲ ಆದ್ದರಿಂದ ಈ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ ಸಮಸ್ಯೆ ಎದುರಾಗಿದೆ.ತಮಗೆ ಈ ಕೂಡಲೇ ಸ್ಪಂದನೆ ನೀಡಬೇಕೆಂದು ಆಗ್ರಹಿಸಿದ್ದಾರೆ.ಸ್ಥಳಕ್ಕೆ ಬಂದ ಪಂಚಾಯತ್ ಮುಖ್ಯಾಧಿಕಾರಿ ಸಾರ್ವಜನಿಕರ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು ಕಾಮಗಾರಿ ನಡೆಸುತ್ತಿರುವ ಕಾಂಟ್ರಾಕ್ಟ್ ದರರನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆಗೆ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ