
ಬೆಳ್ತಂಗಡಿ: ಮಾ.29ರಂದು ಮಧ್ಯಾಹ್ನ ಗುರುವಾಯನಕೆರೆಯ ಶಕ್ತಿ ನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.


ಗುರುವಾಯನಕೆರೆಯಿಂದ ಮೂಡಬಿದಿರೆಗೆ ಹೋಗುತ್ತಿದ್ದ ಕಾರು ಶಕ್ತಿನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್ ಗೆ ಡಿಕ್ಕಿಯಾಗಿದೆ. ಲಾಯಿಲ ನಿವಾಸಿ ಚಾಲಕ ಪ್ರೈಸ್ ಮ್ಯಾಥ್ಯೂ (32) ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
