
ಕಾರ್ಕಳ : ಬುಧವಾರ ಮಧ್ಯಾಹ್ನ ಕುಕ್ಕುಂದೂರು ಗಣಿತ ನಗರ ಸಮೀಪದ ಮಸೀದಿಯ ಹತ್ತಿರ ಕಾರ್ಕಳ ಕಡೆಯಿಂದ ಉಡುಪಿಗೆ ಹೋಗುತ್ತಿದ್ದ ಟೂರಿಸ್ಟ್ ಮಿನಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸಂಭವಿಸಿದೆ.

ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿರುವುದೇ ಕಾರಣವೆನ್ನಲಾಗಿದೆ. ಕಾರ್ಕಳ ನಗರ ಠಾಣಾ ಸರಹದ್ದಿನೊಳಗೆ ಈ ಘಟನೆ ಸಂಭವಿಸಿದೆ.
