
ಕಡಬ : ಮಾ.27ರಂದು ರಾತ್ರಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಮಲಗಿದ್ದವರು ಮುಂಜಾನೆ ಮೃತಪಟ್ಟ ರೀತಿಯಲ್ಲಿ ಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದಿಂದ ವರದಿಯಾಗಿದೆ.

ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕನ್ವರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತಮಿಳುನಾಡಿನ ಮೂಲದ ಸುಜಿನ್ ಅಲ್ಭನ್ ಎಂಬವರು ಮೃತಪಟ್ಟವರು.ಜೇನುಸಾಕಣೆಯ ಕೆಲಸಕ್ಕಾಗಿ ವಿಜಿನ್ ಎಂಬವರಿಗೆ ಕನ್ವರೆಯ ಚೆನ್ನಪ್ಪ ಗೌಡ ಎಂಬವರು ಬಾಡಿಗೆ ಮನೆ ನೀಡಿದ್ದರು. ವಿಜಿನ್ ಎಂಬವರು ಅಭಿನೇಷ್. ವಿನ್ನರ್.ಎ , ಸುಜಿನ್ ಅಲ್ಭನ್ ಎಂಬರನ್ನೂ ಕರೆತಂದಿದ್ದರು.ಈ ಬಾಡಿಗೆ ಮನೆಯಲ್ಲಿ ವಾಸವಿದ್ದವರ ಪೈಕಿ ಸುಜಿನ್ ಅಲ್ಭನ್ ಎಂಬಾತನು, ರಾತ್ರಿ ಮಲಗಿದವರು ಬೆಳಿಗ್ಗೆ ನೋಡಿದಾಗ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಚೆನ್ನಪ್ಪ ಗೌಡ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
