ವಾಮಪದವು ನಿವಾಸಿ ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಪದ್ಮನಾಭ ಸಾಮಂತ್ ಎಂಬಾತ ಕುಕ್ಕಿಪಾಡಿ ನಿವಾಸಿ ಕಾರ್ತಿಕ್ ಎಂಬಾತನಿಗೆ ಸರಕಾರಿ ಉದ್ಯೋಗ ದೊರಕಿಸಿ ಕೊಡುವುದಾಗಿ ಹೇಳಿ ಆತನಿಂದ ಲಕ್ಷಾಂತರ ರೂ ಪಡೆದು ವಂಚನೆ ಮಾಡಿದ್ದಾನೆ. ಈ ಕಾರಣಕ್ಕಾಗಿ ಪದ್ಮನಾಭ ಸಾಮಂತ್ ನ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕುಕ್ಕಿಪಾಡಿ ನಿವಾಸಿ ಕಾರ್ತಿಕ್ ಎಂಬಾತ ಬಡತನದ ಕುಟುಂಬದ ಯುವಕನಾಗಿದ್ದು, ಮಂಗಳೂರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಈತನಿಗೆ, ಸರಕಾರಿ ಉದ್ಯೋಗದ ಕನಸು ಹೊಂದಿದ್ದ.ಈ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಪರಿಚಯಸ್ಥನಾಗಿದ್ದ ಪದ್ಮನಾಭ ಸಾಮಂತ ಎಂಬಾತ ಸರಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದು ಬೆಂಗಳೂರಿನ ಕಾವೇರಿ ಭವನದಲ್ಲಿರುವ ನೀರಾವರಿ ನಿಗಮದಲ್ಲಿ ಗುಮಾಸ್ತ ಉದ್ಯೋಗ ತೆಗಿಸಿಕೊಡುವ ಭರವಸೆ ನೀಡಿದ್ದ ಎದು ಎಂದು ತಿಳಿದು ಬಂದಿದೆ.

