
ಪುತ್ತೂರು : ಸಮಸ್ತ ವಿದ್ಯಾಬ್ಯಾಸ ಮಂಡಳಿ ನಡೆಸಿದ 2023-24ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಪುಣಚ ನುಸ್ರತುಲ್ ಇಸ್ಲಾಂ ಹಯರ್ ಸೆಕೆಂಡರಿ ಮದ್ರಸದಿಂದ 5,7,10ನೇ ತರಗತಿಗೆ ಬರೆದ ಎಲ್ಲಾ ವಿಧ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ನೂರು ಶೇಕಡಾ ಫಲಿತಾಂಶ ಗಳಿಸಿ ಸಾದನೆಗೈದಿದೆ. 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 5 ವಿದ್ಯಾರ್ಥಿಗಳು ಪಸ್ಟ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿರುತ್ತಾರೆ.


ಹತ್ತು ಮತ್ತು ಏಳನೇ ತರಗತಿ ಪಬ್ಲಿಕ್ ಪರೀಕ್ಷೆ ಬರೆದ ಎಲ್ಲಾ ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಐದನೇ ತರಗತಿಯಲ್ಲಿ ಎರಡು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಪರಿಶ್ರಮ, ಅದ್ಯಾಪಕರ ಪರಿಶೀಲನೆ,ಜಮಾಅತ್ ಕಮಿಟಿಯ ಸಹಕಾರ , ಪೋಷಕರ ಪ್ರೋತ್ಸಾಹ ಗುಣಮಟ್ಟದ ಸಾದನೆಗೆ ಸಹಕಾರಿಯಾಗಿದೆ. ಎಂದು ಸದರ್ ಮುಅಲ್ಲಿಂ ಸಿ.ಎಂ. ಇಬ್ರಾಹೀಂ ಕೌಸರಿ ಮುಂಡೋಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

