ಉಳ್ಳಾಲ : ಬೈಕ್ ಅಪಘಾತ; ವಿವಾಹಿತೆ ಸಾವು, ಸವಾರ ಗಂಭೀರ

ಉಳ್ಳಾಲ : ಬೈಕ್ ಅಪಘಾತ; ವಿವಾಹಿತೆ ಸಾವು, ಸವಾರ ಗಂಭೀರ

ಉಳ್ಳಾಲ: ನಾಟೆಕಲ್ ಸಮೀಪ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಹಸವಾರೆ ವಿವಾಹಿತ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದು, ಸವಾರ ಸಂಬಂಧಿ ಗಂಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೋಂದೇಲ್ ದೀಕ್ಷಿತ್ ಎಂಬವರ ಪತ್ನಿ ನಿಧಿ (29) ಸಾವನ್ನಪ್ಪಿದವರು. ಸಹಸವಾರ ಯತೀಶ್ ದೇವಾಡಿಗ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಮುಡಿಪುವಿನಲ್ಲಿ ಜರಗಿದ್ದ ಸಂಬಂಧಿಕರ ಗೃಹಪ್ರವೇಶದಲ್ಲಿ ಭಾಗವಹಿಸಿ ವಾಪಸ್ಸಾಗುವ ಸಂದರ್ಭ ಬೈಕ್, ಸವಾರನ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ ಗೆ ಬಡಿದಿದೆ. ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿದ್ದರು. ನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಯತೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ