
ಎ.3 ರಂದು ಸುಭ್ರಹ್ಮಣ್ಯ ಸಮೀಪದ ಏನೆಕಲ್ಲಿನಲ್ಲಿ ದ ರಾಯಲ್ ಮೋಂಟಾನ ಪ್ರವಾಸಿ ಸಂಸ್ಥೆಯಿಂದ ನಿರ್ಮಾಣವಾಗಿರುವ ಹೋಟೆಲ್ ರೆಸಾರ್ಟ್ ಶುಭಾರಂಭ ವಾಗಲಿದೆ ಎಂದು ದಿ ರಾಯಲ್ ಮೋಂಟಾನ ಪ್ರವಾಸಿ ಸಂಸ್ಥೆಗಳ ಸಂಸ್ಥಾಪಕ ಹರ್ಷಕುಟ್ಟಪ್ಪ ಹೇಳಿದ್ದಾರೆ, ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ವಿವರ ತಿಳಿಸಿದರು ,ದಿ ರಾಯಲ್ ಎಂಟರ್ ಪ್ರೈಸಸ್ ಸಮೂಹ ಸಂಸ್ಥೆಯ ಗುರಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವುದು. ಅದಕ್ಕಾಗಿ ಈ ಸಂಸ್ಥೆ

ಯೇನೆಕಲ್ಲಿನ ದಿ ರಾಯಲ್ ಮೊಂಟಾನಾ ರೆಸಾರ್ಟ್ ಜತೆಗೆ ಕಾರವಾರದಿಂದ ಕೂರ್ಗ್ಟವರೆಗೆ ಕುಂದಾಪುರದಿಂಡ ಕುಕ್ಕೆವರೆಗೆ ಹತ್ತಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಭಾಗದಲ್ಲಿನ ಬೆಳಕಿಗೆ ಬಾರದ ಅದ್ಭುತ ಪ್ರವಾಸಿ ತಾಣಗಳನ್ನು ಜಗತ್ತಿಗೆ ತೆರೆದಿಡುವುದೇ ಸಂಸ್ಥೆಯ.

ಉದ್ದೇಶ.ಅದಕ್ಕಾಗಿ ಈಗಾಗಲೇ ಬ್ರಹ್ಮಾವರ ಸಮೀಪದ ಮಾಬುಕಳದಲ್ಲಿ 10 ಎಕರೆ ವಿಶಾಲವಾದ ದ್ವೀಪವನ್ನು ಅಭಿವೃದ್ಧಿಪಡಿಸುವುದು, ಅಲ್ಲೊಂದು ಭವ್ಯ ರೆಸಾರ್ಟ್ ನಿರ್ಮಿಸುವ ಯೋಜನೆ ಇದೆ. ಕೇರಳದ ಕುಮಾರಕೋಂ ರೀತಿಯಲ್ಲಿ ಇದು ಅಭಿವೃದ್ಧಿ ಹೊಂದಲಿದೆ. ಅಲ್ಲಿಗೆ ಸಮೀಪದಲ್ಲೇ ಡೆಲ್ಟಾ ಬೀಚ್ ಇದ್ದು, ಅದು ದ್ವೀಪ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆಲಸ ಮಾಡಲಿದೆ.

ಕುಂದಾಪುರ ಸಮೀಪದ ಕೋಟೇಶ್ವರದಲ್ಲಿ ಬೀಚ್ ರೆಸಾರ್ಟ್ ಶೀಘ್ರದಲ್ಲಿ ಸ್ಥಾಪನೆಯಾಗಲಿದ್ದು, ಕಾರ್ಕಳ ತಾಲೂಕಿನ ನಾರಾವಿಯ ಪಶ್ಚಿಮ ಘಟ್ಟದ ಸೆರಗಿನಲ್ಲಿ ಸಹ ಒಂದು ಸುಂದರ ರೆಸಾರ್ಟ್ ನಿರ್ಮಾಣವಾಗಲಿದೆ. ಕಾರ್ಕಳದ ದುರ್ಗದ ಸಮೀಪದಲ್ಲಿ ಮತ್ತೊಂದು ಸುಂದರ
ರೆಸಾರ್ಟ್ ತಲೆ ಎತ್ತಲಿದೆ. ಉಜಿರೆ ಸಮೀಪದ ದಿಡುಪೆಯ ಸುಂದರ ತಾಣವನ್ನು ಸಹ ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನ ನಡೆಯಲಿದೆ. ಶೃಂಗೇರಿ ಸಮೀಪದ ಕೊಪ್ಪದ ಬಳಿ ರೆಸಾರ್ಟ್ ಸ್ಥಾಪನೆಯಾಗಲಿದ್ದು, ಸಕಲೇಶಪುರದ ರೆಸಾರ್ಟ್ ಕೆಲಸ ಮುಂದುವರಿದಿದೆ. ಮಡಿಕೇರಿಯ ಕೋಟೆಬೆಟ್ಟದಲ್ಲಿ ಈಗಾಗಲೇ ನೀಲನಕಾಶೆಯನ್ನು ರೂಪಿಸಿದ್ದು, ಕೇರಳದ ವಯನಾಡ್ನಲ್ಲಿ ಸಹ ಹೋಟೆಲ್ ಮತ್ತು ರೆಸಾರ್ಟ್ ನಿರ್ಮಾಣದ ಕೆಲಸ ಆರಂಭಗೊಂಡಿದೆ.

ಸಂಸ್ಥೆಯ ಹೊಸ ಹೊಸ ಯೋಜನೆಗಳೆಲ್ಲವೂ ಹೊರಜಗತ್ತಿಗೆ ಇದುವರೆಗೆ ತೆರೆದುಕೊಂಡಿರದ ಸ್ಥಳಗಳನ್ನು ಪರಿಚಯಿಸುವುದಾಗಿದೆ. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಆಯಾಮ ಸಿಗಲಿದೆ. ಒಂದೆಡೆ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರಾದ ಕರಾವಳಿ,

ಮಲೆನಾಡು, ಇದೀಗ ತನ್ನ ಪ್ರಕೃತಿ ಸೌಂದರ್ಯದ ಮೂಲಕವೂ ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ವಿಶ್ವಾಸ ಇಟ್ಟುಕೊಳ್ಳಲಾಗಿದೆ.
ಕೇರಳ ಹೇಗೆ ತನ್ನ ಪ್ರಕೃತಿ ಸೌಂದರ್ಯವನ್ನು ಪ್ರವಾಸೋದ್ಯಮದ ನೆಲೆಯನ್ನಾಗಿ ಮಾಡಿತೋ, ಅದೇ ರೀತಿಯ ಚಿತ್ರಣ ನಮ್ಮ ಕರಾವಳಿ ತೀರದಲ್ಲೂ ಸಿಗುವಂತಾಗಲಿದೆ.ಜಗತ್ತೇ ನಿಬ್ಬೆರಗಾಗಿಸುವ ಪ್ರಕೃತಿ ಸೌಂದರ್ಯದ ಖನಿ ಕರಾವಳಿ, ಮಲೆನಾಡು, ಉತ್ತರ ಕನ್ನಡ, ಕೊಡಗು ಹಾಗೂ ಸಕಲೇಶಪುರ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆಯನ್ನು ನೀಡುವುದೇ ನಮ್ಮ ಪ್ರಮುಖ ಉದ್ದೇಶ ಎಂದು ಅವರು ಹೇಳಿದರು.ಅದರಂತೆ ಇದೀಗ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಹೋಟೆಲ್ ಮತ್ತು ರೆಸಾರ್ಟನ್ನು ಆರಂಭಿಸುವ ಮೂಲಕ ರಾಯಲ್ ಎಂಟರ್ ಪ್ರೈಸಸ್ ಹೊಸ ಮುನ್ನುಡಿ ಬರೆದಿದೆದ್ದೇವೆ ಎಂದು ಹೇಳಿದರು
ಧನುಶ್ರೀ ಮಾತನಾಡಿ ಏನೆಕಲ್ಲಿನಲ್ಲಿ ನಿರ್ಮಾಣ ವಾಗಿರುವ ರೆಸಾರ್ಟ್ ನಲ್ಲಿ 1,000 ಮಂದಿ ಪಾಲ್ಗೊಳ್ಳಬಹುದಾದ ಮದುವೆ ಲಾನ್,400 ಆಸನ ಸಾಮರ್ಥ್ಯದ ಮಿನಿ ಹಾಲ್
ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ಪ್ರತ್ಯೇಕ ಕಿಚನ್,ಅತ್ಯಾಧುನಿಕ ಎಸಿ, ನಾನ್ ಎಸಿ ಸೌಲಭ್ಯದ 29 ಕೊಠಡಿಗಳು ಹಸಿರ ಮಡಿಲಿನಲ್ಲಿ ಸುಂದರ ಕಾಟೇಜ್ಗಳು
100ಕ್ಕೂ ಅಧಿಕ ಕಾರ್ ಪಾರ್ಕಿಂಗ್ ಸೌಲಭ್ಯ ಹೊಂದಿದ್ದು
ಕರಾವಳಿ ಪ್ರವಾಸೋದ್ಯಮದಲ್ಲಿ ಹೊಸತನದ ಮುನ್ನುಡಿ ಬರೆಯಲಿದೆ ಎಂದು ಹೇಳಿದರು,
ಗಗನ್ ಹರ್ಷ ಮಾತನಾಡಿ ಈಗಾಗಲೇ ನಾವು ಇಲ್ಲಿ ಹೋಳಿಸಂಭ್ರಮದ ಇವೆಂಟ್ ಹಾಕಿದ್ದೆವು, ಸುಳ್ಯ ಪುತ್ತೂರಿನ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದೆವು, ನಮ್ಮ ನಿರೀಕ್ಷೆಗೂ ಮೀರಿ ಇಲ್ಲಿ ಸಹಕಾರ ದೊರೆತಿದೆ, ಮುಂದೆಯೂ ನೀಡುವಂತೆ ಕೇಳಿಕೊಂಡರು.
ವ್ಯವಸ್ಥಾಪಕ ರೂಬೆಲ್ ಮೊದಲಾದವರಿದ್ದರು.
