ಬಂಟ್ವಾಳ: ಖಾಸಗಿ ಬಸ್ ಹಾಗೂ ದ್ವಿಚಕ್ರವಾಹನ ನಡುವೆ ಅಪಘಾತ; ಸವಾರ ಗಂಭೀರ

ಬಂಟ್ವಾಳ: ಖಾಸಗಿ ಬಸ್ ಹಾಗೂ ದ್ವಿಚಕ್ರವಾಹನ ನಡುವೆ ಅಪಘಾತ; ಸವಾರ ಗಂಭೀರ

ಬಂಟ್ವಾಳ: ಬೆಂಜನಪದವು ಸಮೀಪದ ಶಿವಾಜಿ ನಗರದಲ್ಲಿ ನಿನ್ನೆ ಸಂಜೆ ವೇಳೆ ಖಾಸಗಿ ಬಸ್ಸೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಬೆಂಜನಪದವು ನಿವಾಸಿ ನವೀನ್ ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿ.

ಮಲ್ಲೂರು ಕಡೆಯಿಂದ ಬೆಂಜನಪದವು ಕಡಗೆ ಬರುತ್ತಿದ್ದ ರಾಜಲಕ್ಷೀ ಬಸ್ ಹಾಗೂ ಬೆಂಜನಪದವು ಕಡೆಯಿಂದ ಹೋಗುತ್ತಿದ್ದ ಸ್ಕೂಟರ್ ‌ನಡುವೆ ಶಿವಾಜಿನಗರದ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಘಟನೆಯಿಂದ ಸ್ಕೂಟರ್ ರಸ್ತೆಯ ಪಕ್ಕ ಪಲ್ಟಿಯಾಗಿದೆ. ಅಪಘಾತದಲ್ಲಿ ಸ್ಕೂಟರ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಬಸ್ ಡಿಕ್ಕಿಯಾದ ರಭಸಕ್ಕೆ ಚಾಲಕನಿಗೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೆ ಕೆಂಪುಕಲ್ಲಿನ ಕೋರೆಯ ಗುಡ್ಡದ ಮೇಲೆ ಹತ್ತಿ ವಾರೆಯಾಗಿ ನಿಂತುಕೊಂಡಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯವಿಲ್ಲದೆ ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಕುಮಾರ್, ಮೆಲ್ಕಾರ್ ಟ್ರಾಫಿಕ್ಎ.ಎಸ್.ಐ.ಸುರೇಶ್,ಎಚ್.ಸಿ.ಚಂದ್ರಿಕಾ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯ