ಐಪಿಎಲ್ ಕ್ರಿಕೆಟ್ -2024 ಮೊದಲ ಪಂದ್ಯದಲ್ಲಿ ಅರ್ ಸಿ ಬಿ ವಿರುದ್ಧ  ಚೆನ್ನೈ ಸೂಪರ್ ಕಿಂಗ್ಸ್ ಗೆ 6 ವಿಕೆಟ್ ಗಳ ಅಮೋಘ ಜಯ.

ಐಪಿಎಲ್ ಕ್ರಿಕೆಟ್ -2024 ಮೊದಲ ಪಂದ್ಯದಲ್ಲಿ ಅರ್ ಸಿ ಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 6 ವಿಕೆಟ್ ಗಳ ಅಮೋಘ ಜಯ.

ಚೆನೈ ನ ಎಂ ಎ ಚಿದಂಬರಂ ಮೈದಾನದಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಆರ್ ಸಿ ಬಿ ವಿರುಧ್ದ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿದೆ. ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಆರ್ ಸಿ ಬಿ ತಂಡ ಆರಂಭದಲ್ಲಿ 78 ರನ್ ಗಳಿಗೆ 5 ಪ್ರಮುಖ ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿತ್ತು.

ನಂತರ ಜೊತೆಯಾದ ದಿನೇಶ್ ಕಾರ್ತಿಕ್ ಮತ್ತು ವಿಕೆಟ್ ಕೀಪರ್ ಅನುಜ್ ರಾವತ್ ಉತ್ತಮ ಜೊತೆಯಾಟ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರೆ ಅನುಜ್ ರಾವತ್ 25 ಎಸೆತಗಳಲ್ಲಿ 48 ರನ್ ಗಳಿಸಿ ಅಂತಿಮ ಎಸೆತದಲ್ಲಿ ರನ್ ಔಟ್ ಆದರು. ಇವರಿಬ್ಬರ ಜೊತೆಯಾಟದ ನೆರವಿನಿಂದ ಅಂತಿಮವಾಗಿ ಅರ್ಬಿಸಿ ಚೆನೈಗೆ ಗೆಲ್ಲಲು 174 ರನ್ ಗುರಿಯನ್ನು ನೀಡಿತು.

ಆರಂಭದಿಂದಲೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಚೆನೈ ಶಿವಂ ದುಬೆ 28 ಎಸೆತದಲ್ಲಿ 34 ರನ್ ಹಾಗೂ ರವೀಂದ್ರ ಜಡೇಜಾರ 17 ಎಸೆತದಲ್ಲಿ 25 ರನ್ ಜೊತೆಯಾಟದಿಂದ ಸುಲಭವಾಗಿ 18.4 ಓವರ್ ನಲ್ಲಿ ತನ್ನ ಗುರಿ ಮುಟ್ಟಿ ಜಯ ಗಳಿಸಿತು.

ಬ್ಯಾಟಿಂಗ್ ನಲ್ಲಿ ಚೆನೈ ಪರ ಆರ್ ರವೀಂದ್ರ 15 ಎಸೆತದಲ್ಲಿ 37 ರನ್ ಗಳಿಸಿ ಮಿಂಚಿದರು. ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಎಂ ರಹಮಾನ್ 4 ವಿಕೆಟ್ ಪಡೆದರು.

ಅರ್ಸಿಬಿ ಪರ ಕಮ್ರಾನ್ ಗ್ರೀನ್ 2 ವಿಕೆಟ್ ಪಡೆದರು. ಉತ್ತಮ ಮೊತ್ತ ಗಳಿಸಿದರೂ ಆರ್ ಸಿ ಬಿ ಸೋಲುವ ಮೂಲಕ ಅಭಿಮಾನಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿತು.

ಕ್ರೀಡೆ