
ಕೊಣಾಜೆ: ನರಿಂಗಾನ ಗ್ರಾಮದ ಬೋಳ ಲವ ಕುಶ ಕಂಬಳ ಮೈದಾನದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು, 20 ಸಾವಿರ ಮೌಲ್ಯದ 998 ಗ್ರಾಂ ಗಾಂಜಾ ಹಾಗೂ ಆಕ್ಟಿವಾ ಸ್ಕೂಟರ್ ನ್ನು ವಶಪಡಿಸಿಕೊಂಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೂಲತಃ ಕಾಟಿಪಳ್ಳ ನಿವಾಸಿ, ಪ್ರಸಕ್ತ ನೆತ್ತಿಲಪದವಿನಲ್ಲಿ ವಾಸವಿರುವ ಉಮ್ಮರ್ ಫಾರೂಕ್ ಯಾನೆ ಮಂಗಳ್ ಫಾರೂಕ್ ಯಾನೆ ಕುಞಿಮೋನು (68)ಎಂಬಾತನನ್ನು ಬಂಧಿಸಿದ್ದಾರೆ.ಕೊಣಾಜೆ ಠಾಣಾ ಪಿ.ಎಸ್.ಐ ಪುನೀತ್ ಗಾಂವಕಾರ್ ರವರಿಗೆ ಲಭಿಸಿದ ಮಾಹಿತಿಯಂತೆ ಈ ದಾಳಿ ನಡೆಸಿದ್ದು, ದಾಳಿ ವೇಳೆ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 52800 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಮಿಷನರ್ ಅನುಪಮ್ ಅಗರ್ವಾಲ್, ಐ.ಪಿ.ಎಸ್ ರವರ ಮಾರ್ಗದರ್ಶನದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಎ.ಸಿ.ಪಿ. ಧನ್ಯ ಎನ್. ನಾಯಕ್ ರವರ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರವೀದ್ರ ಸಿ ಎಂ, ಪೊಲೀಸ್ ಉಪ ನಿರೀಕ್ಷಕರುಗಳಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್, ಅಶೋಕ್, ಯಲ್ಲಾಲಿಂಗ, ಸಿಬ್ಬಂದಿಗಳಾದ ಎಎಸ್ಐ ಸಂಜೀವ್, ಎಚ್ ಸಿ ರಾಮ ನಾಯ್ಕ್, ವಿನ್ಸಂಟ್ ರೋಡ್ರಿಗಸ್, ಡಬ್ಲ್ಯೂ ಎಚ್ ಸಿ ರೇಶ್ಮಾ, ಮಂಜುನಾಥ್, ಬಸವನಗೌಡ, ಬಸಪ್ಪ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


