ಮಂಗಳೂರು ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಸೀತಾರಾಮ ರೈ ಪುನರಾಯ್ಕೆ.

ಮಂಗಳೂರು ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಸೀತಾರಾಮ ರೈ ಪುನರಾಯ್ಕೆ.

ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶಾಖೆಗಳನ್ನು ಹೊಂದಿರುವ ಮಂಗಳೂರು ಕೃಷಿಕರ ಸಹಕಾರ ಸಂಘ ನಿಯಮಿತದ ನೂತನ ಅಧ್ಯಕ್ಷರಾಗಿ ಕೆ. ಸೀತಾರಾಮ ರೈ ಸವಣೂರು ಅವಿರೋಧ ಆಯ್ಕೆಯಾಗಿದ್ದಾರೆ.

23 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರಿನ ಬೈಕಂಪಾಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿಕೊಂಡು ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 10 ಶಾಖೆ ಹೊಂದಿರುವ ಮಂಗಳೂರು ಕೃಷಿಕರ ಸಹಕಾರ ಸಂಘ ನಿಯಮಿತದ ಆರಂಭದಿಂದ ಈ ತನಕ ನಿರ್ದೇಶಕರಾಗಿದ್ದಾರೆ. ಅವರು ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರಿನ ನಿರ್ದೇಶಕರಾಗಿ 25 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೇ ತಾನೇ 2002ರಲ್ಲಿ ಹುಟ್ಟು ಹಾಕಿದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ದರ್ಬೆ ಪುತ್ತೂರು ಇದರ ಸ್ಥಾಪಕಾಧ್ಯಕ್ಷರಾಗಿದ್ದು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಯಕ್ಷ ಧ್ರುವ ಸೌಹಾರ್ದ ಸಹಕಾರ ಸಂಘ ಇದರ ಸ್ಥಾಪಕ ನಿರ್ದೇಶಕರೂ ಆಗಿದ್ದಾರೆ. ಯಕ್ಷದ್ರುವ ಪಟ್ಲ ಯಕ್ಷಗಾನ ಟ್ರಸ್ಟ್ ನ ಪುತ್ತೂರು ಘಟಕದ ಸ್ಥಾಪಕ ಅಧ್ಯಕ್ಷರು ಕೂಡ ಇವರೇ ಆಗಿದ್ದಾರೆ.

ರಾಜ್ಯ