ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಿ ವಿ ಬಹುತೇಕ ಖಚಿತ. ಪಕ್ಷ ತೊರೆಯುವ ಮಾತೇ ಇಲ್ಲ : ಡಿ ವಿ ಸದಾನಂದ ಗೌಡ

ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಿ ವಿ ಬಹುತೇಕ ಖಚಿತ. ಪಕ್ಷ ತೊರೆಯುವ ಮಾತೇ ಇಲ್ಲ : ಡಿ ವಿ ಸದಾನಂದ ಗೌಡ

ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಉಂಟು ಮಾಡಿದ್ದ ಡಿ ವಿ. ಸದಾನಂದ ಗೌಡ ಬಗೆಗಿನ ಗಾಳಿ ಸುದ್ದಿಗಳಿಗೆ ಬಹುತೇಕ ಇತೀಶ್ರೀ ಕೇಳಿ ಬಂದಿದೆ.ಡಿ.ವಿ ಸದಾನಂದ ಗೌಡರು ಚಿಕ್ಕಬಳ್ಳಾಪುರ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಅಧಿಕೃತ ಮೂಲಗಳು ಬಯಲು ಮಾಡಿದೆ.

ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸಲು ತಳಮಟ್ಟದಲ್ಲಿಯೇ ಶ್ರಮ ಪಟ್ಟಿದ್ದ ಡಿ ವಿ ಎಸ್ ಒಂದು ಕಾಲದಲ್ಲಿ ಬಿ ಜೆ ಪಿಯ ಸಿಡಿಗುಂಡು, ತಮ್ಮದೇ ಶೈಲಿಯಲ್ಲಿ ಪಕ್ಷ ವನ್ನು ಸಂಘಟಿಸಿ ಬೆಳೆಸಿ ಯಶಸ್ಸು ಕಂಡಿದ್ದ ಗೌಡರು ಪಕ್ಷದ ರಾಜ್ಯ ಅಧ್ಯಕ್ಷರಾಗಿ, ರಾಷ್ಟ್ರೀಯ ಉಪಾಧ್ಯಕ್ಷರಾಗಿ ಯಶಸ್ವಿ ಸಂಘಟಕರಾಗಿ ಮಿಂಚಿದ್ದರು,ಪಕ್ಷವೂ ಅವರಿಗೆ ರಾಜ್ಯದ ಮುಖ್ಯ ಮಂತ್ರಿ ,ಕೇಂದ್ರ ಮಂತ್ರಿಯಾಗಿ ಶಾಸಕ, ಸಚಿವ, ಹೀಗೆ ಬಹುತೇಕ ಎಲ್ಲಾ ಹುದ್ದೆಗಳನ್ನು ನೀಡಿತ್ತು,ಸತತ 38 ವರ್ಷ ಸಕ್ರೀಯ ರಾಜಕೀಯಕ್ಕೆ ಇತ್ತೀಚೆಗಷ್ಟೆ, ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದರು, ಆದರೆ ರಾಜ್ಯದ ಬಿಜೆಪಿ ನಾಯಕರಾದ. ಬಸವರಾಜ್ ಬೊಮ್ಮಾಯಿ, ಅಶ್ವತ್ ನಾರಾಯಣ , ಆರ್ ಅಶೋಕ್ , ಸ್ವತ್ಹ ವಿಜಯೇಂದ್ರರೇ ಗೌಡರ ಮನವೊಲಿಸಿ ರಾಜಕೀಯವಾಗಿ ಮುಂದುವರಿಯಲು ವಿನಂತಿ ಮಾಡಿದ್ದರು.

ಆದರೆ ಈ ಬಾರಿಯ ಲೋಕ ಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿತನಕ್ಕೆ ತೀವ್ರ ಆಕಾಂಕ್ಷಿಯಿಯಾಗಿದ್ದ ಡಿ ವಿ ಸದಾನಂದ ಗೌಡರಿಗೆ ನಿರಾಸೆ ಕಾದಿತ್ತು, ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದ ಗೌಡರ ಕ್ಷೇತ್ರಕ್ಕೆ ಏಕಾಏಕಿ ಶೋಭಾ ಕರಂದ್ಲಾಜೆ ಯವರನ್ನು ಘೋಷಣೆ ಮಾಡಲಾಗಿತ್ತು, ಇದರಿಂದ ಸಿಡಿಮಿಡಿ ಗೊಂಡ ಗೌಡರು ಬಹಿರಂಗವಾಗಿ ಅಸಮಧಾನ ಹೊರ ಹಾಕಿದ್ದರು, ಇದು ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು, ಕಾಂಗ್ರೇಸಿನಿಂದಲೂ ಗೌಡರಿಗೆ ಆಫರ್ ಬಂದಿತ್ತು, ಇದನ್ನು ಸ್ವತ್ಹ ಸದಾನಂದ ಗೌಡರೇ ಮಾದ್ಯಮಗಳಿಗೆ ತಿಳಿಸಿದ್ದರು, ಇದರಿಂದ ಡಿ. ವಿ ಸದಾನಂದ ಗೌಡರು ಬಿ ಜೆ ಪಿ ತೊರೆದು ಕಾಂಗ್ರೇಸ್ ಕೈ ಹಿಡಿಯುತ್ತಾರೆ, ಮತ್ತು ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಾರೆ ಎಂಬ ಸುದ್ದಿಗಳು ಹರಿದಾಡಿ ಕೆಲವು ಕ್ಷೇತ್ರಗಳಲ್ಲಿ ಡಿವಿಯ ಹೆಸರು ತಳುಕು ಹಾಕಿ ಕೊಂಡಿತ್ತು, ಈ ಎಲ್ಲಾ ಬೆಳವಣಿಗೆ ಮಧ್ಯೆ ಒಕ್ಕಲಿಗ ಸಮಾಜ ಡಿವಿಯವರ ಬೆಂಬಲಕ್ಕೆ ನಿಂತಿತು, ರಾಜ್ಯದಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗಿದೆ ಎಂಬ ಮಾತು ಹೊರಬಿತ್ತು, ಈ ಎಲ್ಲದರ ನಡುವೆ ಎಚ್ಚೆತ್ತಾ ಬಿಜೆಪಿಯ ಪ್ರಮುಖ ನಾಯಕರು ಗೌಡರಿಗೆ ಬಹುದೊಡ್ಡ ಗಿಪ್ಟ್ ನೀಡಲು ನಿರ್ಧರಿಸಿದ್ದು, ಗೌಡರನ್ನು ಚಿಕ್ಕಬಳ್ಳಾಪುರ ಕ್ಷೇತ್ರಕೆ ಬಿಜೆಪಿ ಅಭ್ಯರ್ಥಿಯಾಗಿ ಅಂತಿಮ ಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದು ಇದೀಗ ಬಲ್ಲ ಮೂಲಗಳಿಂದ ನ್ಯೂಸ್ ರೂಮ್ ಫಸ್ಟ್ ಗೆ ತಿಳಿದು ಬಂದಿದೆ,ಈ ಮೂಲಕ ಡಿ ವಿ ಬಗೆಗಿನ ಗಾಳಿಸುದ್ದಿಗಳಿಗೆ ಒಂದಷ್ಟು ತೆರೆ ಬೀಳಲಿದೆ.

ರಾಜ್ಯ