ಬೆಳ್ತಂಗಡಿ : ಬಸ್ ಕಿಟಕಿಯಿಂದ ಇಳಿಯಲು ಯತ್ನಿಸಿದ್ದ‌ ವ್ಯಕ್ತಿ ರಸ್ತೆಗೆ ಬಿದ್ದು ಸಾವು

ಬೆಳ್ತಂಗಡಿ : ಬಸ್ ಕಿಟಕಿಯಿಂದ ಇಳಿಯಲು ಯತ್ನಿಸಿದ್ದ‌ ವ್ಯಕ್ತಿ ರಸ್ತೆಗೆ ಬಿದ್ದು ಸಾವು

ಬೆಳ್ತಂಗಡಿ: ಬಸ್ಸಿನಲ್ಲಿ ಪ್ರಯಾಣಿಕರು ಹೆಚ್ಚಿದ್ದರಿಂದ ಕಿಟಕಿಯಿಂದ ಇಳಿಯಲು ಯತ್ನಿಸಿದ ಅಪರಿಚಿತ ಪ್ರಯಾಣಿಕರೋರ್ವರು ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮಾ. 17ರಂದು ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬಂದಿದ್ದ ಅಂದಾಜು 50ರಿಂದ 60 ವರ್ಷದ ಅಪರಿಚಿತ ವ್ಯಕ್ತಿ ಧರ್ಮಸ್ಥಳ ಬಸ್‌ ತಂಗುದಾಣದಲ್ಲಿ ಬಸ್ಸಿನ ಬಲಭಾಗದ ಕಿಟಕಿಯಿಂದ ಇಳಿಯಲು ಯತ್ನಿಸಿದ ವೇಳೆ ಕೈ ಜಾರಿ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದಾಗ ಮೃತಪಟ್ಟಿರುವ ಕುರಿತು ಗೊತ್ತಾಗಿದೆ.ಈ ಬಗ್ಗೆ ಬಸ್‌ ನಿರ್ವಾಹಕ ಅಜ್ಜಪ್ಪ ಪಡೆಪ್ಪ ಮೇಟಿ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತಪಟ್ಟ ಅಪರಿಚಿತ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿಗೆ ಧರ್ಮಸ್ಥಳ ಪೊಲೀಸ್‌ ಠಾಣೆಯನ್ನು ಅಥವಾ 08256-277253 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ರಾಜ್ಯ