
ಬಾವಿಗೆ ಬಿದ್ದಿದ್ದ ಕಾಳಿಂಗ ಸರ್ಪವೊಂದನ್ನು ಉರಗ ತಜ್ಞರೊಬ್ಬರು ರಕ್ಷಣೆ ಮಾಡಿ ಮತ್ತೆ ಅರಣ್ಯಕ್ಕೆ ಬಿಟ್ಟ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಎಂಬಲ್ಲಿ ಮನೆಯೊಂದರ ಬಾವಿಯಲ್ಲಿ ಕಾಳಿಂಗ ಸರ್ಪವೊಂದು ಬಿದ್ದಿದ್ದು ಮೇಲೆ ಬರಲಾಗದೆ ಪರದಾಡುತ್ತಿತ್ತು.ಮಿತ್ತಬಾಗಿಲಿನ ಪಗಾರೆ ಕುಶಾಲಪ್ಪ ಗೌಡ ಎಂಬವರ ಮನೆಯ ಸಮೀಪದ ಬಾವಿಯಲ್ಲಿ ಬಿದ್ದು ನರಳಾಡುತ್ತಿರುವ ಕಾಳಿಂಗ ಸರ್ಪದ ಬಗ್ಗೆ ತಕ್ಷಣ ಸ್ಥಳಿಯರು ಸ್ನೇಕ್ ಆಶೋಕ್ ಅವರಿಗೆ ಮಾಹಿತಿ ರವಾನಿಸಿದ್ದಾರೆ. ಬೆಳ್ತಂಗಡಿಯ ಲಾಯಿಲದ ನಿವಾಸಿಯಾಗಿರುವ ಸ್ನೇಕ್ ಅಶೋಕ್ ತಕ್ಷಣ ಸ್ಥಳಕ್ಕೆ ಅಗಮಿಸಿ ಬಾವಿಯಿಂದ ಕಾಳಿಂಗವನ್ನು ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಈಗಾಗಲೇ ನೂರಾರು ಕಾಳಿಂಗ ಸರ್ಪಗಳನ್ನು ರಕ್ಷಣೆ ಮಾಡಿರುವ ಸ್ನೇಕ್ ಅಶೋಕ್ ಬಹಳ ಸಾಹಸಮಯ ರೀತಿಯಲ್ಲಿ ಬಾವಿಯಿಂದ ಕಾಳಿಂಗ ಸರ್ಪವನ್ನು ಮೇಲೆ ಎತ್ತಿದ್ದಾರೆ. ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
