ಮಂಗಳೂರು : ಖಾಸಗಿ ಬಸ್‌ ಚಾಲಕನಿಗೆ ಹಲ್ಲೆ

ಮಂಗಳೂರು : ಖಾಸಗಿ ಬಸ್‌ ಚಾಲಕನಿಗೆ ಹಲ್ಲೆ

ಮಂಗಳೂರು: ಖಾಸಗಿ ಬಸ್‌ ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ದಲ್ಲಿ ನಡೆದಿದೆ.

ಭಾಸ್ಕರ್‌ ಹಲ್ಲೆಗೊಳಗಾದವರು.

ಬಸ್‌ನಲ್ಲಿ ಹುಡುಗಿ ಜೊತೆ ಮಾತನಾಡುತ್ತಿದ್ದರೆಂಬ ಕಾರಣಕ್ಕೆ ಕೆಲವರು ಆಯುಧದಿಂದ ಹಲ್ಲೆ ನಡೆಸಿದರು ಎನ್ನಲಾಗಿದ್ದು, ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಾಲಕ ಮತ್ತು ಹುಡುಗಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ