ಖಾಸಗಿ ಬಸ್ಸ್ ನಿರ್ವಾಹಕನಿಂದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ- ಆರೋಪಿಯ ಬಂಧನ.‌

ಖಾಸಗಿ ಬಸ್ಸ್ ನಿರ್ವಾಹಕನಿಂದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ- ಆರೋಪಿಯ ಬಂಧನ.‌

ಸುಳ್ಯದ ತಾಲೂಕು ಮಂಡೆಕೋಲಿನಲ್ಲಿ ತಡರಾತ್ರಿ ಯುವಕನೊಬ್ಬ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕುರಿತು ದೂರು ದಾಖಲಾಗಿದೆ ಎಂದು ವರದಿಯಾಗಿದೆ.

ಮಾ13ರ ತಡರಾತ್ರಿ ಸುಮಾರು ಒಂದು ಗಂಟೆಯ ಆಸುಪಾಸಿನಲ್ಲಿ ಈ ಘಟನೆ ನಡೆದಿದ್ದು,ಯುವಕನು ಅಪ್ರಾಪ್ತೆ ಯುವತಿಯ ಮನೆಯೊಳಗೆ ಪ್ರವೇಶಿಸಿ ದೌರ್ಜನ್ಯ ಕೃತ್ಯ ಎಸಗಲು ಯತ್ನಿಸಿದಾಗ ಯುವತಿ ಬೊಬ್ಬೆ ಹೊಡೆದುದರಿಂದ ಮನೆಯವರೆಲ್ಲ ಎಚ್ಚರಗೊಂಡು ಯುವತಿಯ ಕೊಠಡಿಗೆ ಬಂದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ಬಂಧಿತ ಯುವಕ ಮೂಲತಃ ಉಪ್ಪಿನಂಗಡಿಯವನಾಗಿದ್ದು ಖಾಸಗಿ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದ್ದು ಈ ಘಟನೆಯ ಕುರಿತಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ