ಅರಂತೋಡಿನಲ್ಲಿ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ

ಅರಂತೋಡಿನಲ್ಲಿ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ

ಸುಳ್ಯ ತಾಲೂಕು ಅರಂತೋಡು ಗ್ರಾಮದ ಪಿಂಡಿಮನೆ ರೇಣುಕಾಪ್ರಸಾದ್ ಎಂಬವರ ಮನೆಯಲ್ಲಿ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 180 ಕೆಜಿಯಷ್ಟು ರಬ್ಬರ್ ಶೀಟ್ ಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.

ಮಧ್ಯರಾತ್ರಿಯಲ್ಲಿ ನಾಯಿ ಬೊಗಳುತ್ತಿರುವುದನ್ನು ಗಮನಿಸಿದ ಮನೆಯವರು ಹೊರಗೆ ಬಂದು ನೋಡಿದಾಗ ಬೆಂಕಿ ಹೊತ್ತಿ ಉರಿಯುತ್ತಿತ್ತು. ರಾತ್ರಿ ವಿದ್ಯುತ್ ಸ್ಥಗಿತಗೊಂಡಿದ್ದ ಕಾರಣ ಮನೆಯವರೆಲ್ಲಾ ಸೇರಿ ಬ್ಯಾರೆಲ್ ನಲ್ಲಿದ್ದ ನೀರನ್ನು ಬಕೆಟ್ ಮೂಲಕ ಸ್ಮೋಕ್ ಹೌಸ್ ಮೇಲೆ ಹಾಯಿಸಿದ ಕಾರಣ ಕೊಟ್ಟಿಗೆಗೆ ಬೆಂಕಿ ಹತ್ತಿಕೊಳ್ಳುವುದು ತಪ್ಪಿತು ಎಂದು ಮನೆಯ ಮಾಲೀಕರು ಮಾದ್ಯಮಕ್ಕೆ ತಿಳಿಸಿದ್ದಾರೆ.

ರಾಜ್ಯ