ಗ್ಯಾರೇಜ್‌ನಲ್ಲಿ ನಡೆದ ಅವಘಡ; ಬಸ್ ಮಾಲಕ‌ ಸಾವು

ಗ್ಯಾರೇಜ್‌ನಲ್ಲಿ ನಡೆದ ಅವಘಡ; ಬಸ್ ಮಾಲಕ‌ ಸಾವು

ಮಣಿಪಾಲ : ಇಲ್ಲಿನ 80 ಬಡಗಬೆಟ್ಟು ಎಂಬಲ್ಲಿನ ಗ್ಯಾರೇಜ್ ಒಂದರಲ್ಲಿ ನಡೆದ ಅವಘಡದಲ್ಲಿ ಬಸ್ ಮಾಲಕರು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಮೃತಪಟ್ಟವರನ್ನು ಉಡುಪಿ ಮಾಂಡವಿ ಬಸ್‌ನ ಮಾಲಕ ದಯಾನಂದ ‌ಶೆಟ್ಟಿ (65) ಎಂದು ತಿಳಿದುಬಂದಿದೆ.

ಇವರು ತಮ್ಮ ಬಸ್‌ನ್ನು 80 ಬಡಗಬೆಟ್ಟು ಬಳಿಯ ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದರು. ಇದನ್ನು ನೋಡಲು‌ ಬಂದಿದ್ದ ಈ ಸಂದರ್ಭದಲ್ಲಿ ಮೆಕ್ಯಾನಿಕ್ ಬಸ್‌ನ್ನು ಒಮ್ಮಿಂದೊಮ್ಮಲೆ ಚಲಾಯಿಸಿದ್ದರು. ಆಗ ಬಸ್‌ನ ಎದುರು ಇದ್ದ ದಯಾನಂದ ಅವರು ಬಸ್ ನ‌ ಎದುರಿನ ಚಕ್ರಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಅವಘಡದಲ್ಲಿ ದಯಾನಂದ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ