
ಸುಳ್ಯ : ಕೋಕೋ ದಾರಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ, ಅಡಿಕೆ ಹಳದಿ ರೋಗ, ಹಾಗೂ ಎಲೆ ಚುಕ್ಕಿ ರೋಗಗಳಿಂದ ಕಂಗಾಲಾಗಿರುವ ಸಂದರ್ಭದಲ್ಲಿ, ಮಿಶ್ರ ಬೆಳೆಯಾಗಿ ಕೋಕೋ ಬೆಳೆದಿರುವ ರೈತರಿಗೆ ಒಂದಿಷ್ಟು ಸಂತಸ ತಂದಿದೆ, ಇದೇ ಮೊದಲಭಾರಿಗೆ ಕೋ ಕೋ ದಾಖಲೆ ದರ ಏರಿಸಿಕೊಂಡಿದೆ, ಪ್ರತೀ ಕೆ ಜಿ 160 ರೋಪಾಯಿಗೆ ಕೋಕೊ ಖರೀದಿ ಮಾಡಲಾಗುತ್ತಿದ್ದು, ಇದು ಇನ್ನೂರರ ಗಡಿ ಮೀರಬಲ್ಲುದು ಎಂದು ಹೇಳಲಾಗಿದೆ .

ಚಾಕೊಲೇಟ್ ತಯಾರಿಕೆಯಲ್ಲಿ ಕೋಕೋ ಅತ್ಯಂತ ಪ್ರಮುಖ ಸಾಮಗ್ರಿಯಾಗಿದೆ. ಆದರೆ, ವಿಶ್ವದ ಒಟ್ಟು ಕೋಕೋ ಉತ್ಪಾದನೆಯಲ್ಲಿ ಶೇ.80ರಷ್ಟು ಪಶ್ಚಿಮ ಆಫ್ರಿಕಾದಲ್ಲಿಯೇ ಬೆಳೆಯಲಾಗುತ್ತದೆ. ವಿಶ್ವದ ಮೊದಲ ಮತ್ತು ಎರಡನೇ ಅತಿ ದೊಡ್ಡ ಕೋಕೋ ಉತ್ಪಾದಕರಾದ ಐವರಿ ಕೋಸ್ಟ್ ಮತ್ತು ಘಾನಾದಿಂದ ಪೂರೈಕೆ ತೀವ್ರ ಇಳಿಕೆಯಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಗಳಿಗೆ ಕೋಕೋ ಪೂರೈಕೆ ಕುಸಿದಿದೆ. ಕಳೆದ ವರ್ಷ 91,000 ಟನ್ ಕೋಕೋ ಪೂರೈಕೆಯಾಗಿತ್ತು. ಆದರೆ, ಈ ವರ್ಷ 56,000 ಟನ್‌ಗಳಿಗೆ ಕಡಿಮೆ ಮಾಡಿದೆ.
ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.ಕೋಕೋ ಬೆಲೆ ಹೆಚ್ಚಳದ ಬೆನ್ನಲ್ಲೇ ಕೆಲವು ಚಾಕೋಲೆಟ್ ಕಂಪನಿಗಳು ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಈಗಾಗಲೇ ಉತ್ಪನ್ನದ ಬೆಲೆಗಳನ್ನು ಹೆಚ್ಚಿಸಿವೆ. ಹೀಗಾಗಿ ಚಾಕೊಲೇಟ್ ಬೆಲೆಗಳು ಹೆಚ್ಚಳವಾಗಬಹುದು ಎನ್ನಲಾಗಿದೆ.
