
ರೋಟರಿ ಶಾಲೆ ಬಳಿಯಿರುವ ವಿಘ್ನೇಶ್ ಇಲೆಕ್ಟ್ರಿಕಲ್ಸ್ ಇದರ ಮಾಲಕರಾದ ಮಹೇಶ್ ಅಟ್ಲೂರು ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ್ದಾರೆ.

ಈ ಉದ್ದೇಶಕ್ಕಾಗಿ ಒಂದು ವರ್ಷದಿಂದ ತನ್ನ ಕೂದಲನ್ನು ಆರೈಕೆ ಮಾಡಿ ಬೆಳೆಸಿದ್ದ ಇವರು ಇದೀಗ ಕೂದಲನ್ನು ಕತ್ತರಿಸಿ ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಅಮೃತ ಕೇಶ ಕೂದಲು ದಾನ ಅಭಿಯಾನಕ್ಕೆ ಕೈ ಜೋಡಿಸುವ ಮೂಲಕ ಕ್ಯಾನ್ಸರ್ ಪೀಡಿತರಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

