ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಕೇಂದ್ರ ಸರಕಾರ ಮಹತ್ತರ ಕಾನೂನನ್ನು ಇಂದು ಜಾರಿಗೆ ತಂದಿದೆ.ಇನ್ನೂ ಮುಂದೆ ಭಾರತ ದೇಶದ ಪೌರತ್ವ ಪಡೆಯಲು ಪೋರ್ಟಲ್ ನಲ್ಲಿ ನೋಂದಾವಣೆ ಕಡ್ಡಾಯ. ಮೊನ್ನೆಯಷ್ಟೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ CAA ಕಾನೂನು ಜಾರಿ ಕುರಿತು ಮಾತಾಡಿದ್ದರು. ಅದರಂತೆ ಇಂದು ಜಾರಿಗೆ ಬಂದಿದೆ.ಏನಿದೆ ಈ CAA ಕಾನೂನಿನಲ್ಲಿ. ವಿದೇಶದಿಂದ ವಲಸೆ ಬಂದ ಮುಸ್ಲಿಮೇತರ ಅಲ್ಪ ಸಂಖ್ಯಾತರಿಗೆ ಭಾರತದ ಪೌರತ್ವ ಪಡೆಯಲು ಇದು ಸಹಕಾರಿಯಾಗಲಿದೆ. ಹಾಗೆಯೇ ವಿದೇಶದಲ್ಲಿ ಬಹು ಸಂಖ್ಯಾತರಾಗಿದ್ದು ಇಲ್ಲಿ ವಲಸೆ ಮತ್ತು ನುಸುಳಿ ಬಂದಿದ್ದರೆ ಅಂಥವರನ್ನು ಪುನಃ ಅವರ ದೇಶಕ್ಕೆ ಮರಳಿ ಕಳುಹಿಸಲಿದೆ ಈ ಕಾನೂನು. ಈ ಹಿಂದೆ ಈ ಕಾನೂನಿಗೆ ವಿರೋದ ವ್ಯಕ್ತವಾಗಿದ್ದು ಕೇರಳ ಹಾಗೂ ಪಕ್ಷಿಮ ಬಂಗಾಳದಿಂದ ವ್ಯಾಪಕ ವಿರೋದ ವ್ಯಕ್ತವಾಗಿತ್ತು ಆದರೂ ಮೋದಿ ನೇತೃತ್ವದ ಕೇಂದ್ರ ಸರಕಾರ ಇಂದು ಈ ಕಾನೂನನ್ನು ಜಾರಿಗೆ ತಂದಿದೆ. ಚುನಾವಣೆ ಸಂದರ್ಭದಲ್ಲಿ ಜಾರಿಗೆ ತಂದ ಈ ಕಾನೂನು ಬಿಕೆಪಿಗೆ ವರವಾಗಲಿದೆಯಾ ಎಂದು ಕಾದು ನೋಡಬೇಕಾಗಿದೆ.


