ಅಡ್ಕಾರ್ ಕಟ್ಟಡದಿಂದ ಬಿದ್ದು  ಗಂಭೀರ ಗಾಯಗೊಂಡ ಪಳ್ಳಂಗೋಡು ನಿವಾಸಿ ಮೃತ್ಯು

ಅಡ್ಕಾರ್ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡ ಪಳ್ಳಂಗೋಡು ನಿವಾಸಿ ಮೃತ್ಯು

ಸುಳ್ಯ ಅಡ್ಕಾರ್ ಮನೆಯೊಂದರ ಸ್ವಚ್ಚತೆ ಕೆಲಸ‌ಮಾಡುತ್ತಿರುವ‌ ವ್ಯಕ್ತಿ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಮಾ.7 ನಡೆದಿದೆ.

ಅಡ್ಕಾರ್ ಜಿ ಅಬ್ದುಲ್ಲಾ ಎಂಬವರ ಮನೆಯಲ್ಲಿ ಪೈಟಿಂಗ್ ಕೆಲಸಕ್ಕಾಗಿ ನೀರು ಹಾಕಿ ತೊಳೆಯುತ್ತಿರುವ ಸಂದರ್ಭದಲ್ಲಿ‌ ಅಡೂರು ಪಳ್ಳಂಗೊಡು ನಿವಾಸಿ ಜಬ್ಬಾರ್ ಎಂಬವರು ಕಾಲುಜಾರಿ ಕಟ್ಟಡದಿಂದ ಕೆಳಗೆ ಬಿದ್ದಿದ್ದರು ಅವರನ್ನು ಕೂಡಲೇ ಸುಳ್ಯ ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು ತಲೆಗೆ ಗಂಭೀರ ಗಾಯಗಳಿದ್ದು ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದಿದ್ದರು.ಅಲ್ಲಿಂದ ಚಿಕಿತ್ಸೆ ಪಲಕಾರಿಯಾಗುವ ಗುಣಲಕ್ಷಣ ಇಲ್ಲದ ಕಾರಣ ಅಲ್ಲಿಂದ ಮನೆಗೆ ತರುತ್ತಿರುವ ಸಂದರ್ಭದಲ್ಲಿ ಆ್ಯಂಬುಲೆನ್ಸ್ ನಲ್ಲಿ ಮೃತಪಟ್ಟರುಮೃತರು ಪತ್ನಿ ಮೂವರು ಮಕ್ಕಳನ್ನು ಅಗಲಿದ್ದಾರೆ

ರಾಜ್ಯ