ಉಡುಪಿ : ಕಾಂಗ್ರೇಸ್ ಮುಖಂಡ ಎಂ.ಜಿ ಹೆಗಡೆ ಭಾವಚಿತ್ರಕ್ಕೆ ಎಲೆ ಅಡಿಕೆ ಹಾಕಿ ಉಗಿದ ಪ್ರತಿಭಟನಾಕಾರರು

ಉಡುಪಿ : ಕಾಂಗ್ರೇಸ್ ಮುಖಂಡ ಎಂ.ಜಿ ಹೆಗಡೆ ಭಾವಚಿತ್ರಕ್ಕೆ ಎಲೆ ಅಡಿಕೆ ಹಾಕಿ ಉಗಿದ ಪ್ರತಿಭಟನಾಕಾರರು

ಉಡುಪಿ : ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಕಾಂಗ್ರೇಸ್ ಮುಖಂಡರೊಬ್ಬರು ಪಾಕ್ ಪರ ಘೋಷಣೆ ಸಾಭೀತಾಗದಿದ್ದಲ್ಲಿ ಮಾಧ್ಯಮಗಳ ಮುಖಕ್ಕೆ ಊಗಿರಿ ಎಂದು ಹೇಳಿಕೆ ನೀಡಿದ್ದರು.ಮಾಧ್ಯಮವೊಂದರ ಸಂದರ್ಶನ ವೇಳೆ ಈ ಹೇಳಿಕೆ ನೀಡಿದ್ದ ಎಂ.ಜಿ.ಹೆಗಡೆ ಆರೋಪ ಸಾಬೀತು ಪಡಿಸಿ ಎಂದು ಸವಾಲು ಕುಡಾ ಹಾಕಿದ್ದರು. ಹೆಗಡೆಯವರ ಈ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದು, ಎಫ್‌ಎಸ್‌ಎಲ್ ವರದಿ ಬಂದು ಆರೋಪಿಗಳು ಬಂಧನವಾಗುತ್ತಲೇ ಎಂ.ಜಿ.ಹೆಗಡೆ ಟ್ರೋಲ್ ಆಗಿದ್ದರು.

ಇದೀಗ ಉಡುಪಿಯಲ್ಲಿ ಅವರ ಭಾವ ಚಿತ್ರಕ್ಕೆ ಎಲೆ ಅಡಿಕೆ ಜಗಿದು ಉಗಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಹಲವು ಬಿಜೆಪಿ ನಾಯಕರು ಬೀಡ ಜಗಿದು ಎಂ.ಜಿ.ಹೆಗಡೆ ಭಾವಚಿತ್ರಕ್ಕೆ ಉಗಿದಿದ್ದಾರೆಈ ವೇಳೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ವಿಫಲವಾಗಿದೆ. ಹಾಗಾಗಿ ಈ ವೈಫಲ್ಯವನ್ನು ಮುಚ್ಚಿ ಹಾಕಲು ಇಂತಹ ಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ ಎಂದು ಟೀಕಿಸಿದರು. ಹಾಗೂ ಹಿಂದುಗಳ ಭಾವನೆಗೆ ನಿರಂತರವಾಗಿ ಧಕ್ಕೆ ತರಲಾಗುತ್ತಿದೆ.

ವಿಧಾನ ಸೌಧ ಶಕ್ತಿ ಕೇಂದ್ರದ ಒಳಗೆ ಪೊಲೀಸ್ ಭದ್ರತೆ ನಡುವೆ ಅಷ್ಟು ಜನ ಹೇಗೆ ಬಂದರು ಎಂದು ಪ್ರಶ್ನಿಸಿದರು.ಪಾಕ್ ಪರ ಘೋಷಣೆ ಮಾಡಿಲ್ಲ ಎಂದು ಎಲ್ಲರೂ ಹೇಳಿಕೆ ಕೊಟ್ಟಿದ್ದರು. ಈ ವಿಚಾರದಲ್ಲಿ ಮಾಧ್ಯಮಗಳಿಗೆ ಕಾಂಗ್ರೆಸ್ ನಾಯಕರು ಸವಾಲುಗಳನ್ನು ಕೂಡ ಹಾಕಿದ್ದರು. ಈಗ ಎಫ್.ಎಸ್.ಎಲ್ ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಸಾಭೀತಾಗಿದೆ. ಇಂದು ಪ್ರತಿಭಟನೆ ಮಾಡಿ ವಿರೋಧಿಸಿದವರ ಭಾವಚಿತ್ರಕ್ಕೆ ಉಗಿದಿದ್ದೇವೆ ಎಂದರು

ರಾಜ್ಯ