
ಪುತ್ತೂರು: ಕಾಡು ಪ್ರಾಣಿಗಳು ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದು ಕೃಷಿ ನಾಶ ಮಾಡಿದ ಬಗ್ಗೆ ಪುತ್ತೂರು ತಾಲೂಕು ಬಡಗನ್ನೂರಿನಿಂದ ವರದಿಯಾಗಿದೆ.

ಮಾ.5ರಂದು ರಾತ್ರಿ ಬಡಗನ್ನೂರು ಗ್ರಾಮದ ಕೆಳಗಿನ ಪೇರಾಲುನಲ್ಲಿ ತೋಟವೊಂದಕ್ಕೆ ಕಾಡು ಹಂದಿ ದಾಳಿ ಮಾಡಿ ಅಡಿಕೆ ಮರದ ಬುಡವನ್ನು ಅಗೆದು ಹಾಕಿದ್ದು ಸಮಾರು 30 ರಿಂದ 40 ಎಡೆ ಸಸಿಯನ್ನು ಭೇರು ಸಹಿತ ಕಿತ್ತು ಹಾಕಿ ಅಪಾರ ನಷ್ಟ ಸಂಭವಿಸಿದೆ.ಈ ಭಾಗದಲ್ಲಿ ಕಾಡು ಹಂದಿ ಹಾವಳಿ ನಿರಂತರವಾಗಿದ್ದು ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬರುವ ಕಾಡು ಹಂದಿಗಳು ಕೃಷಿಯನ್ನು ನಾಶ ಮಾಡುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
