ಆಗ್ರೋ ಸುವರ್ಣ ಸಂಭ್ರಮ :ಆಗ್ರೋ ಕೃಷಿ ಚಿಂತನಬದುಕು ಸುಂದರವಾಗಲು ಕೃಷಿ ಸಮೃದ್ದವಾಗಿರಬೇಕು: ಡಾ. ಆರ್ ಕೆ ನಾಯರ್.

ಆಗ್ರೋ ಸುವರ್ಣ ಸಂಭ್ರಮ :ಆಗ್ರೋ ಕೃಷಿ ಚಿಂತನಬದುಕು ಸುಂದರವಾಗಲು ಕೃಷಿ ಸಮೃದ್ದವಾಗಿರಬೇಕು: ಡಾ. ಆರ್ ಕೆ ನಾಯರ್.

ಪ್ರಕೃತಿಗೂ ಒಂದು ತತ್ವವಿದೆ, ಪ್ರಕೃತಿಯು ತನ್ನ ರಕ್ಷಣೆಗೆ ಪ್ರಕೃತಿಯೇ ಜೀವಿಗಳನ್ನು ಉತ್ಪಾದಿಸಿಕೊಳ್ಖುತ್ತದೆ, ರೈತರು ಕೃಷಿಭೂಮಿಗೆ ಕೆಮಿಕಲ್ ಪ್ರಯೋಗ ಮಾಡುವುದರಿಂದ ನೈಸರ್ಗಿಕವಾಗಿ ಜನ್ಮತಳೆದ ಜೀವಿಗಳು ಸಾವನಪ್ಪಿ ಭೂಮಿ ಪಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಪ್ರಕೃತಿಗೂ ಒಂದು ತತ್ವವಿದೆ ಎಂದು ಭಾರತದ ಪ್ರಸಿದ್ಧ ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಅಭಿಪ್ರಾಯ ಪಟ್ಟಿದ್ದಾರೆ, ಅವರು ಆಗ್ರೋ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬದುಕು ಸುಂದರವಾಗಲು ಕೃಷಿ ಸಮೃದ್ದವಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಳ್ಯದಲ್ಲಿ ಪ್ರಥಮ ಕೃಷಿ ಪರಿಕರಗಳ ಮಳಿಗೆಯಾಗಿ ಆರಂಭವಾದ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್‌ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿಆಗೋ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿ ಆಗ್ರೋ ಕೃಷಿ ಚಿಂತನ ಕಾರ್ಯಕ್ರಮ ನಡೆಯಿತು,ಸ್ವಯಂಚಾಲಿತ ನೀರಾವರಿ ವಿಧಾನದ ಬಗ್ಗೆ ಅನಂತ ರಾಮಕೃಷ್ಣ ಪೆರುವಾಯಿ, ಕನಿಷ್ಠ ನೀರಿನಲ್ಲಿ ಅಡಿಕೆ ಕೃಷಿ ಬಗ್ಗೆ ಪ್ರವೀಣ ಕೇಶವ ಮೈರುಗ ಕುರುಡಪದವು ಹಾಗೂ ಟ್ಯಾಂಕ್‌ಗಳ ಬಳಕೆ ಮಳೆ ಕೊಯ್ದು ವಿಷಯದ ಬಗ್ಗೆ ಮುರಳೀಧರ ಭಟ್ಬಂಗಾರಡ್ಕ ಮಾಹಿತಿ ತಿಳಿಸಿದರು.

ವಿಶೇಷ ಕೃಷಿಚಿಂತನದಲ್ಲಿ ಪ್ರಕೃತಿ- ಯಂತ್ರ- ಬದುಕು ವಿಚಾರದಲ್ಲಿಡಾ.ಆರ್.ಕೆ.ನಾಯರ್ ಮಾತಾಡಿದರು, ವೇದಿಕೆಯಲ್ಲಿ, ಮಂಜುಳಾ ರಾಮಚಂದ್ರ ಕಾರ್ಯಕ್ರಮದ ನಿರ್ವಾಹಕರಾದ ಮಹೇಶ್ ಪುಚ್ಚಪ್ಪಾಡಿ, ರಮೇಶ್ ದೇಲಂಪಾಡಿ ಉಪಸ್ಥಿತರಿದ್ದರು, ಸಂಸ್ಥೆ ಮಾಲಕ ರಾಮಚಂದ್ರ ಪಿ ಸ್ವಾಗತಿಸಿ, ಆಗ್ರೋ ಸಂಸ್ಥೆಯ ಸಿಇ ಓಸನತ್ ಪಿ.ವಂಧಿಸಿದರು, ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ, ಆಗ್ರೋ ಸಂಸ್ಥೆ ಬೆಳೆದುಬಂದ ಬಗ್ಗೆ ಪತ್ರಕರ್ತ ದುರ್ಗಾಕುಮಾರದ ನಿರ್ಮಾಣ ಮಾಡಿದ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯಿತು

ರಾಜ್ಯ