ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ :ಕಂಡನಾರ್ ಕೇಳನ್ ದೈವದ ಬೆಳ್ಳಾಟಕ್ಕೆ ಹರಿದು ಬಂದ ಜನ ಸಾಗರ.

ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ :ಕಂಡನಾರ್ ಕೇಳನ್ ದೈವದ ಬೆಳ್ಳಾಟಕ್ಕೆ ಹರಿದು ಬಂದ ಜನ ಸಾಗರ.

 

ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಯುತ್ತಿದ್ದು ಮಾ.6 ರ ರಾತ್ರಿ ಕಂಡನಾರ್ಕೇಳನ್ ದೈವದ ವೆಳ್ಳಾಟಂ, ನಡೆಯಿತು , ಸೀಮಿತ ಕಡೆಗಳಲ್ಲಿ ಅಪರೂಪವಾಗಿ ನಡೆಯುವ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಕಂಡನಾರ್ ಕೇಳನ್ ದೈವದ ವೆಳ್ಳಾಟ ವೀಕ್ಷಿಸಲು ಸಾವಿರಾರು ಭಕ್ತಾದಿಗಳು ಹರಿದು ಬರುತ್ತಾರೆ ಅಂತೆಯೇ ಮೇನಾಲಕ್ಕೂ ಸುಮಾರು 15 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು  ದಕ್ಷಿಣ ಕನ್ನಡ ಮಾತ್ರವಲ್ಲದೆ ನೆರೆಯ ಕೇರಳದಿಂದಲೂ ಆಗಮಿಸಿದ್ದರು,

ಈ ಮಹೋತ್ಸವವನ್ನು ಸಾವಿರಾರು ಜನರು ಏಕ ಕಾಲದಲ್ಲಿ ಕುಳಿತು ನೋಡಲು ವ್ಯವಸ್ತಿತ ಗ್ಯಾಲರಿಗಳನ್ನು ಬಹಳ ಆಕರ್ಷಕವಾಗಿ  ನಿರ್ಮಿಸಲಾಗಿತ್ತು , ಮಲಯಾಳಂ ಮತ್ತು ಕನ್ನಡದಲ್ಲಿ ವಿಶೇಷ ನಿರೂಪಣೆ, ಸಿಡಿಮದ್ದು ಪ್ರದರ್ಶನ ನಡೆಸಲಾಯಿತು,

ಸುಸ್ಸಜ್ಜಿತ  ಊಟದ ವ್ಯವಸ್ಥೆ

ಸುಮಾರು  ಮೂರು ಸಾವಿರ ಮಂದಿ ಏಕ ಕಾಲದಲ್ಲಿ  ಊಟಮಾಡಬಹುದಾದ ಚಪ್ಪರ ನಿರ್ಮಿಸಲಾಗಿತ್ತು, ಮತ್ತು ಬಹಳ ಶುಚಿ ಮತ್ತು ರುಚಿಯ ಊಟದ ವ್ಯವಸ್ಥೆಯನ್ನು  ಕಲ್ಪಿಸಲಾಗಿತ್ತು, ಕಿಟ್ಟಣ್ಣ ರೈಗಳ ನೇತ್ರತ್ವದ ತಂಡ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು, ಮಹಿಳಾ ತಂಡಗಳು ಶ್ರಮವಹಿಸುತ್ತಿದ್ದರು, ನಿರಂತರ ಅನ್ನದಾನ ನಡೆಸುತ್ತಿದ್ದರು.

 8 ಕಡೆಗಳಲ್ಲಿ ವಾಹನ ಪಾರ್ಕಿಂಗ್ 

ಸುಳ್ಯ ಮತ್ತು ಕೇರಳ, ಅಜ್ಜಾವರ , ಆಲೆಟ್ಟಿ ಭಾಗದಿಂದ ಆಗಮಿಸುವ ಭಕ್ತಾದಿಗಳ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಗೆ ಸುಮಾರು 8 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು,ಪಾರ್ಕಿಂಗ್ ವ್ಯವಸ್ಥೆಯನ್ನು ಸ್ವಯಂ ಸೇವಕರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.

ಮಹೋತ್ಸವ ಸಮಿತಿ ಅಧ್ಯಕ್ಷ  ಗುಡ್ಡಪ್ಪ ರೈ,  ಸಂಚಾಲಕರಾದ ಸುಬೋದ್ ಶೆಟ್ಟಿ ಮೇನಾಲ, ಪ್ರಾ ಕಾರ್ಯದರ್ಶಿ ರಾಧಾಕೃಷ್ಣ ಪರಿವಾರಕಾನ, ಸಂಘಟನಾ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಕುತ್ತಿಕೋಲು ಕ್ಷೇತ್ರದ ಅಧ್ಯಕ್ಷ ಆರ್ ಕುಂಞಿಕಣ್ಣನ್,  ಕಾರ್ಯಾಧ್ಯಕ್ಷರುಗಳಾದ ರವೀಂದ್ರನಾಥ್ ರೈ ಮೇನಾಲ,ಜಗನ್ನಾಥ್ ರೈ ಮೇನಾಲ, ಹರಿಪ್ರಕಾಶ್ ಗೌಡ ಕುರುಂಜಿ, ವಿಜಯಕುಮಾರ್ ತುದಿಯಡ್ಕ, ಮೊದಲಾದವರು  ಆಗಮಿಸುತ್ತಿದ್ದ ಭಕ್ತರನ್ನು ಸ್ವಾಗತಿಸುತ್ತಿದ್ದರು. 

ರಾಜ್ಯ