ಮಾಣಿ: ಮಹಿಳೆಯ ಜೊತೆ ವ್ಯಕ್ತಿಯ ಅನುಚಿತ ವರ್ತನೆ; ದೂರು ದಾಖಲು..!

ಮಾಣಿ: ಮಹಿಳೆಯ ಜೊತೆ ವ್ಯಕ್ತಿಯ ಅನುಚಿತ ವರ್ತನೆ; ದೂರು ದಾಖಲು..!

ಮಾಣಿ: ಬಂಟ್ವಾಳ ತಾಲೂಕು ಮಾಣಿ ಎಂಬಲ್ಲಿ ಮಹಿಳೆಯೋರ್ವರರು ನಡೆದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿ ಅನುಚಿತವಾಗಿ ವರ್ತಿಸಿರುವು ಘಟನೆ ನಡೆದಿದೆ.

ಆರೋಪಿಯನ್ನು ಸ್ಟೀವನ್ ಆಲ್ವೀನ್ ಪಾಯಿಸ್ ಎಂದು ಗುರುತಿಸಲಾಗಿದೆ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮಹಿಳೆಯೋರ್ವರು ಬೆಳಿಗ್ಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಎಂಬಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಯಾದ ಸ್ಟೀವನ್ ಆಲ್ವೀನ್ ಪಾಯಿಸ್ ಎಂಬಾತನು, ತನ್ನ ಮೋಟಾರ್ ಸೈಕಲ್ ನಲ್ಲಿ ಮಹಿಳೆಯ ಬಳಿ ಬಂದು ಅನುಚಿತವಾಗಿ ವರ್ತಿಸಿರುತ್ತಾನೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 33/2024 ಕಲಂ: 354 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ರಾಜ್ಯ