ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಚಾಲನೆ,ನೂರಾರು ಭಕ್ತರಿಂದ ಹಸಿರು ಹೊರೆಕಾಣಿಕೆ ವೈಭವದ ಮೆರವಣಿಗೆ

ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಚಾಲನೆ,ನೂರಾರು ಭಕ್ತರಿಂದ ಹಸಿರು ಹೊರೆಕಾಣಿಕೆ ವೈಭವದ ಮೆರವಣಿಗೆ

ಮೇನಾಲದ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಇಂದು ಸುಳ್ಯ ಹಾಗೂ ಅಜ್ಜಾವರದಿಂದ ಏಕಕಾಲಕ್ಕೆ ಹಸಿರುವಾಣಿ ಮೆರವಣಿಗೆ ನಡೆದು ಕಲವರ ತುಂಬುವ ಮೂಲಕ ದೈವಕಟ್ಟು ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಇದಕ್ಕೆ ಮೊದಲು ಸುಳ್ಯದಿಂದ ಬೆಳಗ್ಗೆ ಚೆನ್ನಕೇಶವ ದೇವಸ್ಥಾನದಲ್ಲಿ ಪೂಜೆ ನಡೆದು ಬಳಿಕ ವಾಹನ ಮೆರವಣಿಗೆಯ ಮೂಲಕ ವಿವೇಕಾನಂದ ಸರ್ಕಲ್ ಬಳಿಯಿಂದಾಗಿ ಹಸಿರುವಾಣಿ ಮೆರವಣಿಗೆ ಸಾಗಿ ಬಂತು ಇನ್ನೊಂದು ಕಡೆ ಅಜ್ಜಾವರ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಪೂಜೆಯ ಬಳಿಕ ಅಲ್ಲಿಂದ ಹಸಿರುವಾಣಿ ವಾಹನ ಮೆರವಣಿಗೆ ಆರಂಭಗೊಂಡು ಸಾಗಿ ಬಂದು ಎರಡೂ ಕಡೆಯಿಂದಲೂ ಏಕಕಾಲದಲ್ಲಿ ಮೆರವಣಿಗೆ ಮೇನಾಲಕ್ಕೆ ಬಂದು ಅಲ್ಲಿಂದ ಕಾಲ್ನಡಿಗೆಯ ಮೂಲಕ ದೈವಸ್ಥಾನಕ್ಕೆ ಹಸಿರುವಾಣಿ ಕೊಂಡೊಯ್ಯಲಾಯಿತು.

ಮಾ.6 ರಂದುಸಂಜೆ ಗಂಟೆ 4 ರಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ಸಂಜೆ ಗಂಟೆ 5.30 ರಿಂದ ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ,ರಾತ್ರಿ ಗಂಟೆ 7.30 ರಿಂದ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ರಾತ್ರಿ ಗಂಟೆ 11.00 ರಿಂದ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್ರಾತ್ರಿ ಗಂಟೆ 12.00 ರಿಂದ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ.

ಮಾ.7ರಂದು ಪೂ.ಗಂಟೆ 9ರಿಂದ ಶ್ರೀ ಕೋರಚ್ಚನ್ ದೈವ, ಪೂ. ಗಂಟೆ 11ರಿಂದ ಶ್ರೀ ಕಂಡನಾರ್ ಕೇಳನ್ ದೈವ ಅ.2ರಿಂದ ಶ್ರೀ ವಯನಾಟ್ ಕುಲವನ್ ದೈವ, ಅ 3.00ರಿಂದ ಶ್ರೀ ವಿಷ್ಣುಮೂರ್ತಿ ದೈವ ಹೊರಡಲಿದೆ.ರಾತ್ರಿ ಗಂಟೆ 10.00ರಿಂದ ಮರಪಿಳರ್ಕಲ್, ರಾತ್ರಿ ಗಂಟೆ 11ಕ್ಕೆ ಕೈವೀದ್ ನಡೆಯಲಿದೆ.

ರಾಜ್ಯ