ಬಸ್ಸು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಚಾರ್ಮಾಡಿಯ ಯುವಕ ಸಾವು

ಬಸ್ಸು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಚಾರ್ಮಾಡಿಯ ಯುವಕ ಸಾವು

ಬೆಳ್ತಂಗಡಿ: ಮಾ.1 ರಂದು ಬಸ್ಸು ಮತ್ತು ಬೈಕ್ ಅಪಘಾತದಲ್ಲಿ ಚಾರ್ಮಾಡಿ ಯುವಕ ಸಾವನ್ನಪ್ಪಿದ ಘಟನೆ ಮಂಗಳೂರುನಲ್ಲಿ ನಡೆದಿದೆ.ಮೃತಪಟ್ಟ ಯುವಕನನ್ನು ಚಾರ್ಮಾಡಿ ಜಲಾಲಿಯ್ಯನಗರ ನಿವಾಸಿ ಸಿನಾನ್ (20) ಎಂದು ಗುರುತಿಸಲಾಗಿದೆ.

ಮಂಗಳೂರಿನಲ್ಲಿ ಕಾಲೇಜಿನ ಬಿಡುವಿನ ಸಮಯದಲ್ಲಿ ಪುಡ್ ಡೆಲಿವರಿ ಕೆಲಸವನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಮಂಗಳೂರಿನ ಯೇನಪೋಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದರು. ತಾಯಿ ವಹೀದ, ಓರ್ವ ಸಹೋದರಿಯನ್ನು ಅಗಲಿದ್ದಾರೆ.

ರಾಜ್ಯ