ಪಾಲಡ್ಕ ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್; ಗೂನಡ್ಕ ಮಾರುತಿ ಶಾಲೆಯ ಶಿಕ್ಷಕ ಗಂಭೀರ ಗಾಯ

ಪಾಲಡ್ಕ ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್; ಗೂನಡ್ಕ ಮಾರುತಿ ಶಾಲೆಯ ಶಿಕ್ಷಕ ಗಂಭೀರ ಗಾಯ

ಪಾಲಡ್ಕದಲ್ಲಿ ಅವಿನಾಶ್ ಬಸ್ಸಿಗೆ ಡಿಕ್ಕಿಯಾದ ಬೈಕ್ ಸವಾರ ಗಂಭೀರ ಗಾಯವಾದ ಘಟನೆ ಮಾ ೧ ರಂದು ಬೆಳಿಗ್ಗೆ ನಡೆದಿದೆ ಘಟನೆಯಲ್ಲಿ ಗೂನಡ್ಕ ಮಾರುತಿ ಶಾಲೆಯ ಶಿಕ್ಷಕ ಪದ್ಮನಾಭ ಪೂಜಾರಿ ಮನೆ ಗಾಯಾಳು ಎಂದು ತಿಳಿದುಬಂದಿದೆ .

ಅವರು ಸುಳ್ಯದಿಂದ ಗೂನಡ್ಕ ಕಡೆಗೆ ತೆರಳುತ್ತಿದ್ದರು, ಪಾಲಡ್ಕದಲ್ಲಿ ಅವಿನಾಶ್ ಬಸ್ಸಿಗೆ ಡಿಕ್ಕಿಹೊಡೆದು ರಸ್ತೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದೆ.

ಗಾಯಾಳುವನ್ನು ಆಸ್ಪತ್ರೆಗೆ ಕರೆತರುವಲ್ಲಿ ಮಾನವೀಯತೆ ಮರೆತ ಜನಗಾಯಗೊಂಡು ಬಿದ್ದಿದ್ದ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು, ವಾಹನ ಚಾಲಕರು ಮುಂದೆ ಬಾರದೆ ಸುಮಾರು ಹೊತ್ತು ಆಸ್ಪತ್ರೆಯಲ್ಲಿ ರಸ್ತೆಯಲ್ಲಿಯೇ ಕಳೆಯಬೇಕಾಯಿತು, ಕೊನೆಗೆ ಕೆ ವಿ ಜಿ ಅಂಬ್ಯುಲೆನ್ಸ್ ಮುಖಾಂತರ ಕೆವಿಜಿ ಆಸ್ಪತ್ರೆಗೆ ಸಾಗಿಸಲಾಯಿತು.

ರಾಜ್ಯ