ಫೆ 19 : ಸಂಕೇಶ್- ಪೇರಾಲಿನಲ್ಲಿ ಸಯ್ಯದ್ ಆಟ್ಟು ಉಪ್ಪಾಪ ತಂಙಳ್ ರವರ ಆಂಡ್ ನೇರ್ಚೆ,ಹಾಗೂ ಏಕ ದಿನ ಧಾರ್ಮಿಕ ಉಪನ್ಯಾಸ :ಸಾವಿರಾರು ಮಂದಿ ರೋಗಿಗಳಿಗೆ ಆಶಾ ಕೇಂದ್ರವಾಗಿರುವ ಸಂಕೇಶ್ ಮಜ್ಲೀಸ್
ರಾಜ್ಯ

ಫೆ 19 : ಸಂಕೇಶ್- ಪೇರಾಲಿನಲ್ಲಿ ಸಯ್ಯದ್ ಆಟ್ಟು ಉಪ್ಪಾಪ ತಂಙಳ್ ರವರ ಆಂಡ್ ನೇರ್ಚೆ,ಹಾಗೂ ಏಕ ದಿನ ಧಾರ್ಮಿಕ ಉಪನ್ಯಾಸ :ಸಾವಿರಾರು ಮಂದಿ ರೋಗಿಗಳಿಗೆ ಆಶಾ ಕೇಂದ್ರವಾಗಿರುವ ಸಂಕೇಶ್ ಮಜ್ಲೀಸ್

ಸುಳ್ಯ ಸಂಕೇಶ್ ಮಜ್ಲಿಸ್ ಪೇರಾಲ್ ಇದರ ವತಿಯಿಂದ ಫೆಬ್ರವರಿ 19 ರಂದು ಆದೂರು ಸಯ್ಯದ್ ಆಟ್ಟು ಉಪ್ಪಾಪ ತಂಙಳ್ ರವರ ಹೆಸರಿನಲ್ಲಿ ಅಂಡ್ ನೇರ್ಚೆ ಹಾಗೂ ಏಕದಿನ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ಅಜ್ಜಾವರ ಗ್ರಾಮದ ಸಂಕೇಶ್ ಪೇರಾಲಿನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಓರ್ವರಾದ ಅಡ್ವಕೇಟ್ ಮೂಸಾ ಕುಂಞಿ…

ಉಡುಪಿ: ಪರೀಕ್ಷಾ ಕೊಠಡಿಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿ ಕ್ಲಾಸ್ ರೂಂನಿಂದ ಜಿಗಿದು ಆತ್ಮಹತ್ಯೆ
ರಾಜ್ಯ

ಉಡುಪಿ: ಪರೀಕ್ಷಾ ಕೊಠಡಿಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿ ಕ್ಲಾಸ್ ರೂಂನಿಂದ ಜಿಗಿದು ಆತ್ಮಹತ್ಯೆ

ಉಡುಪಿ: ಮಣಿಪಾಲದ ಕಾಲೇಜ್ ನಲ್ಲಿ ಪರೀಕ್ಷೆಯ ವೇಳೆ ಮೊಬೈಲ್ ಬಳಕೆ ಮಾಡಿ ಪರೀಕ್ಷಾ ಕೊಠಡಿಯಿಂದ ಹೊರಹಾಕಲ್ಪಟ್ಟ ವಿದ್ಯಾರ್ಥಿ ಮನನೊಂದು ಕ್ಲಾಸ್ ರೂಂನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಬಿಹಾರ ಮೂಲದ ಸತ್ಯಂ ಸುಮನ್ (20) ಎಂದು ತಿಳಿದು ಬಂದಿದೆ.ಮಧ್ಯಾಹ್ನ ಪರೀಕ್ಷಾ ಕೇಂದ್ರದಲ್ಲಿ…

ಸುಳ್ಯ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು
ರಾಜ್ಯ

ಸುಳ್ಯ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು

ಸುಳ್ಯ : ಅಪರಾಧ ಕ್ರಮಾಂಕ 36/2018 ಕಲಂ 20(ಬಿ)(2)(ಎ) ಎನ್ ಡಿ ಪಿ ಎಸ್ ಪ್ರಕರಣದ ಆರೋಪಿಯಾಗಿ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ಧ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹಾಸನ ಜಿಲ್ಲೆಯ ನಿವಾಸಿ ಸಾಧಿಕ್ ಶರೀಫ್ ಎಂದು ಗುರುತಿಸಲಾಗಿದೆ.ಫೆ.16 ರಂದು ಬೆಳ್ಳಾರೆ ಠಾಣಾ ಪೊಲೀಸರು ಹಾಸನ ಜಿಲ್ಲೆ…

ಕಡಬ: ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ವೃದ್ಧ ದಂಪತಿ
ರಾಜ್ಯ

ಕಡಬ: ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ವೃದ್ಧ ದಂಪತಿ

ಕಡಬ(ದಕ್ಷಿಣ ಕನ್ನಡ): ವ್ಯಕ್ತಿಯೊಬ್ಬರು ತಾವು ವಾಸಿಸುತ್ತಿರುವ ಮನೆಯನ್ನು ತೆರವುಗೊಳಿಸುವಂತೇ ನ್ಯಾಯಾಲಯದಿಂದ ಆದೇಶ ತಂದ ಹಿನ್ನೆಲೆಯಲ್ಲಿ ವೃದ್ಧ ದಂಪತಿ ತಮಗೆ ದಯಾಮರಣ ಕರುಣಿಸುವಂತೆ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ಘಟನೆ ಕಡಬದಲ್ಲಿ ನಡೆದಿದೆ. ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬವರು ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು…

ಇಂದು ಇಸ್ರೋದಿಂದ ಹವಾಮಾನ ಮುನ್ಸೂಚನಾ ಉಪಗ್ರಹ ಉಡಾವಣೆ
ರಾಜ್ಯ

ಇಂದು ಇಸ್ರೋದಿಂದ ಹವಾಮಾನ ಮುನ್ಸೂಚನಾ ಉಪಗ್ರಹ ಉಡಾವಣೆ

ನವದೆಹಲಿ : ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇಂದು ಇನ್‌ಸ್ಯಾಟ್‌-3ಡಿಎಸ್‌ ಹವಾಮಾನ ಮುನ್ಸೂಚನಾ ಉಪಗ್ರಹವನ್ನು ಉಡಾವಣೆ ಮಾಡಲಿದೆ ಎಂದು ವರದಿಯಾಗಿದೆ. ಇಂದು ಸಂಜೆ 5.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹ ಉಡಾವಣೆಗೊಳ್ಳಲಿದ್ದು, 51.7 ಮೀಟರ್‌ ಎತ್ತರವಿರುವ ಜಿಎಸ್‌ಎಲ್‌ವಿ ರಾಕೆಟ್‌ ಉಪಗ್ರಹವನ್ನು ಹೊತ್ತೂಯ್ಯಲಿದೆ.ಇನ್ನು ಉಪಗ್ರಹ ಒಟ್ಟು ತೂಕ 2,274 ಕೆ.ಜಿ.…

ಸಮಾನ ಮನಸ್ಕ ರೈತಪರ ಹೋರಾಟಗಾರರ   ಸಮಿತಿಯಿಂದ ಸುಳ್ಯದಲ್ಲಿ ಪ್ರತಿಭಟನಾ ಸಭೆ
ರಾಜ್ಯ

ಸಮಾನ ಮನಸ್ಕ ರೈತಪರ ಹೋರಾಟಗಾರರ ಸಮಿತಿಯಿಂದ ಸುಳ್ಯದಲ್ಲಿ ಪ್ರತಿಭಟನಾ ಸಭೆ

ರೈತ ಸಂಘಟನೆಗಳು ದೆಹಲಿಯಲ್ಲಿ ಹಮ್ಮಿಕೊಂಡಿರುವ ಬ್ರಹತ್ ಹೋರಾಟ ದಿಲ್ಲಿ ಚಲೋ ಅಂಗವಾಗಿ ರೈತರು ಮತ್ತು ಕಾರ್ಮಿಕರು ಕರೆ ಕೊಟ್ಟಿರುವ ದೇಶದಾಧ್ಯಂತ ಗ್ರಾಮೀಣ ಭಾರತ್ ಬಂದ್ ಗೆ ಬೆಂಬಲವಾಗಿ ಇಂದುಸಮಾನಮನಸ್ಕ ರೈತಪರ ಹೋರಾಟಗಾರರು ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾ ಸಭೆ ಸುಳ್ಯದಲ್ಲಿ ನಡೆಯಿತು. ಪ್ರತಿಭಟನೆಯಲ್ಲಿ…

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ
ರಾಜ್ಯ

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಪುತ್ತೂರು : ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಲಗಿದಲ್ಲೇ ಮೃತಪಟ್ಟಿರುವ ಘಟನೆ ಉಪ್ಪಿನಂಗಡಿಯ ಸಮೀಪ ನಡೆದಿದೆ. ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಿವಾಸಿ ಉದ್ಯಮಿ ದಾವೂದ್ ಅವರ ಪುತ್ರಿ ಹಫೀಝಾ (17) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಹಫೀಝಾ ಕಲಿಯುತ್ತಿದ್ದರು.…

ಬಂಟ್ವಾಳ : ರಸ್ತೆ ದಾಟಲು ನಿಂತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ
ರಾಜ್ಯ

ಬಂಟ್ವಾಳ : ರಸ್ತೆ ದಾಟಲು ನಿಂತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ

ಬಂಟ್ವಾಳ : ನರಿಕೊಂಬು ಗ್ರಾಮದ ಮೊಗರ್ನಾಡು ಎಂಬಲ್ಲಿ ರಸ್ತೆ ದಾಟಲು ನಿಂತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಪಾದಚಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.ಗಾಯಾಳು ಪಾದಚಾರಿಯನ್ನು ಧರ್ಣಪ್ಪ (75) ಹಾಗೂ ಬೈಕ್ ಸವಾರನನ್ನು ಮೋಕ್ಷಿತ್ ಎಂದು ಗುರುತಿಸಲಾಗಿದೆ. ಧರ್ಣಪ್ಪ ಅವರು ಮೊಗರ್ನಾಡು ಎಂಬಲ್ಲಿ…

ಧರ್ಮಸ್ಥಳ : ಎಟಿಎಂ ಬಳಿ, ನಿಲ್ಲಿಸಿದ್ದ ರೂ.1.50 ಲಕ್ಷ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ಕಳವು
ರಾಜ್ಯ

ಧರ್ಮಸ್ಥಳ : ಎಟಿಎಂ ಬಳಿ, ನಿಲ್ಲಿಸಿದ್ದ ರೂ.1.50 ಲಕ್ಷ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ಕಳವು

ಫೆ.15ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಾಹಿತಿ ಕಛೇರಿ ಬಳಿ ಇರುವ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ನ್ನು ಯಾರೋ ಕಳ್ಳರು ಕಳವುಗೈದ ಪ್ರಕರಣ ವರದಿಯಾಗಿದೆ. ಹಿಟ್ನಾಳ್ ಗ್ರಾಮ, ಕೊಪ್ಪಳ ನಿವಾಸಿ ಬಸವರಾಜ್,ಎಸ್, ಎಂಬುವರು ನೀಡಿದ ದೂರಿನಂತೆ, ಫೆ.14 ರಂದು ರಾತ್ರಿ ಧರ್ಮಸ್ಥಳ ಗ್ರಾಮದ…

ಕಡೆಪಾಲ : ಆಟೋ ರಿಕ್ಷಾ ಪಲ್ಟಿ – ಅಪಾಯದಿಂದ ಪಾರು
ರಾಜ್ಯ

ಕಡೆಪಾಲ : ಆಟೋ ರಿಕ್ಷಾ ಪಲ್ಟಿ – ಅಪಾಯದಿಂದ ಪಾರು

ದ. ಕ. ಸಂಪಾಜೆ ಗ್ರಾಮದ ಕಲ್ಲುಗಂಡಿಯ ಕಡೆಪಾಲ ದಲ್ಲಿ ದನ ಅಡ್ಡ ಬಂದು ರಿಕ್ಷಾ ಪಲ್ಟಿ ಯಾದ ಘಟನೆ ಇಂದು ಸಂಜೆ ನಡೆದಿದೆ.ಕಲ್ಲುಗುಂಡಿಯಿಂದ ಸುಳ್ಯಕ್ಕೆ ನಿಡಿಂಜಿ ಉಮೇಶ ಚಲಾಯಿಸುತ್ತಿದ್ದು, ದಿಡೀರ್ ದನ ಅಡ್ಡ ಬಂದಿದ್ದು, ರಿಕ್ಷಾ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಪಲ್ಟಿ ಯಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿoದ ಪಾರಾಗಿದ್ದಾರೆ.

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI