
ಕರಾವಳಿಯ ಗಂಡು ಕಲೆ ಎಂದೇ ಖ್ಯಾತಿಯೆತ್ತಿದ ಯಕ್ಷಗಾನ ಇಂದು ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಬೆಳೆದು ನಿಂತಿದೆ. ಇಂಥದೊಂದು ಜಾತಿ, ಮತ, ಧರ್ಮದ ಚೌಕಟ್ಟನ್ನು ಮೀರಿದ ಕಲಾವಿದರ ಸಾಲಿಗೆ ಪಡುಬೆಟ್ಟುವಿನ ಮನೀಶ್ ಮಸ್ಕರೇನಸ್–ನ್ಯಾನ್ಸಿ ಲಿಝಿ ದಂಪತಿ ಪುತ್ರಿ 5ನೇ ತರಗತಿ ವಿದ್ಯಾಥ್ರಿನಿ ಮೆಲಿಷಾ ನಿಶಾಲ್ ಮಸ್ಕರೇನ್ಹಸ್ ಸೇರ್ಪಡೆಯಾಗಿದ್ದಾಳೆ.ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶಾಲೆಯಲ್ಲಿ ಯಕ್ಷಗಾನಗುರು ಯೋಗಿಶ ಶರ್ಮ ಆಳದಂಗಡಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಶನಿವಾರ ಜರುಗಿದ ‘ಶಾಂಭವಿ ವಿಜಯ’ ಪ್ರದರ್ಶನದಲ್ಲಿ ಶ್ರೀದೇವಿಯಾಗಿ ಮಿಂಚಿದಳು.ಇಂದು ಜಾತಿ,ಧರ್ಮ, ಮತದ ಎಲ್ಲೆ ಮೀರಿ ಎಲ್ಲರೂ ಯಕ್ಷಗಾನದತ್ತ ಆಕರ್ಷಿತರಾಗಿದ್ದಾರೆ.

ಐದಾರು ದಶಕಗಳ ಹಿಂದೆಯೇ ತೆಂಕುತಿಟ್ಟು ಯಕ್ಷಗಾನದಲ್ಲಿ ಕ್ರೈಸ್ತಧರ್ಮದ ಕ್ರಿಶ್ಚಿಯನ್ ಬಾಬು, ನೆಲ್ಯಾಡಿಯ ಜೋಸೆಫ್ ಡಿಸೋಜ ಖ್ಯಾತ ಪುಂಡುವೇಷಧಾರಿಗಳಾಗಿ ಧಿಗಿಣ ವೀರರೆಂದೇ ಛಾಪು ಮೂಡಿಸಿದ್ದಾರು. ಇದೀಗ ಮೆಲಿಷಾ ಅವರೂ ಇದೇ ಹಾದಿಯಲ್ಲಿ ಹೆಜ್ಜೆಯಿರಿಸುತ್ತಿದ್ದಾರೆ.ಹತ್ತು ದಿನಗಳ ವ್ರತ“ಶ್ರೀದೇವಿ ಮಹಾತ್ಮೆಯ ಶ್ರೀದೇವಿ ಪಾತ್ರಾಧಾರಿ ವೃತದಲ್ಲಿರುವುದು ರೂಢಿಯಲ್ಲಿದೆ. ಪಾತ್ರಕ್ಕೂ ವಿಶೇಷ ಭಕ್ತಿಯಲ್ಲಿ ನಡೆದುಕೊಳ್ಳುವ ಸಲುವಾಗಿ ಮೆಲಿಷಾ ಕಾರ್ಯಕ್ರಮದ10 ದಿನ ಮುಂಚಿತವಾಗಿ ಸಾತ್ವಿಕ ಆಹಾರ ಸೇವನೆ ರೂಢಿಸಿಕೊಂಡಿದ್ದಳು”.‘4 ದಶಕದ ನಂತರ ಪಡುಬೆಟ್ಟುವಿನಲ್ಲಿ ನಡೆದ ಮಕ್ಕಳ ಯಕ್ಷಗಾನ ಪ್ರದರ್ಶನ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.
ಕೀರ್ತಿಶೇಷ ಗೋಪಾಕೃಷ್ಣ ಶಗ್ರಿತ್ತಾಯರ ನೆನಪಿನಲ್ಲಿ ಅವರೇ ಹುಟ್ಟು ಹಾಕಿದ ಬಾಲಸುಬ್ರಹ್ಮಣ್ಯ ಮಕ್ಕಳ ಮೇಳವನ್ನು ಇದೀಗ ನಮ್ಮ ಪ್ರತಿಷ್ಠಾನದಿಂದ ಉದ್ದೀಮನಗೊಳಿಸಿದ್ದು ಪ್ರಥಮ ತಂಡದಿಂದಲ್ಲೇ ಈ ಕುವರಿಯ ಮನೋಜ್ಣ ಅಭಿನಯ ತಂಡಕ್ಕೆ ಹೆಮ್ಮೆ ನೀಡಿದೆ. ಗುಡ್ಡಪ್ಪ ಬಲ್ಯ ಗೌರವಾಧ್ಯಕ್ಷರು,ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯ-ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ,ಪಡುಬೆಟ್ಟುರಂಗವಲ್ಲಿ ಶ್ರೀದೇವಿಯಾಗಿ ಬಾಲ ಕಲಾವಿದೆ ಮೆಲಿಷಾ ನಿಶಾಲ್ ಮಸ್ಕರೇನ್ಹಸ್ ‘ನಮ್ಮ ಹಿರಿಯರ ಕಾಲದಿಂದಲೂ ನಾವು ಯಕ್ಷಗಾನ ಅಭಿಮಾನಿಗಳು.6 ವರ್ಷದಿಂದಲೇ ಮೆಲಿಷಾ ಯೂಟ್ಯೂಬ್ ಮೂಲಕ ಯಕ್ಷಗಾನ ವೀಕ್ಷಿಸುತ್ತಾ ಯಕ್ಷಗಾನದ ಕಡೆಗೆ ಆಕರ್ಷಿತಳಾಗಿದ್ದಳು.
ನಮ್ಮ ಕುಟುಂಬದಲ್ಲಿ ,ಧಾರ್ಮಿಕ ಕೇಂದ್ರದಲ್ಲಿ ಮತ್ತುನರೆಹೊರೆಯಲ್ಲಿ ಯಕ್ಷಗಾನ ಪಾತ್ರ ನಿರ್ವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.ಶ್ರೀದೇವಿ ಪಾತ್ರ ನಿರ್ವಹಿಸುವ ಮುಂಚಿತವಾಗಿ ನಾವು ಹತ್ತು ದಿನ ಮೆಲಿಷಾ ಮಾಂಸಾಹಾರ ತ್ಯಜಿಸಿದ್ದೆವು ಎಂದು ಹೇಳಿದ್ದಾರೆ ಸ.ಹಿ.ಪ್ರಾ.ಶಾಲೆ ಪಡುಬೆಟ್ಟುವಿನಲ್ಲಿ ಗೌರವ ಶಿಕ್ಷಕಿಯಾಗಿರುವ ಮೆಲಿಷಾಳ ತಾಯಿ ನ್ಯಾನ್ಸಿ ಲಿಝಿ .