ಪುತ್ತೂರು :ಲಾರಿ ಜೀಪು ಅಪಘಾತದಲ್ಲಿ ಓರ್ವ ಮೃತಪಟ್ಟು ಆರು ಮಂದಿಗೆ ತೀವ್ರ ಗಾಯವಾದ ಘಟನೆಗೆ ಸಂಬಂಧಿಸಿ ಲಾರಿ ಚಾಲಕನಿಗೆ ಜೈಲು ಶಿಕ್ಷೆ ಮತ್ತು ದಂಡ ಪ್ರಕಟಿಸಿದ ಪುತ್ತೂರು ನ್ಯಾಯಾಧೀಶರು

ಪುತ್ತೂರು :ಲಾರಿ ಜೀಪು ಅಪಘಾತದಲ್ಲಿ ಓರ್ವ ಮೃತಪಟ್ಟು ಆರು ಮಂದಿಗೆ ತೀವ್ರ ಗಾಯವಾದ ಘಟನೆಗೆ ಸಂಬಂಧಿಸಿ ಲಾರಿ ಚಾಲಕನಿಗೆ ಜೈಲು ಶಿಕ್ಷೆ ಮತ್ತು ದಂಡ ಪ್ರಕಟಿಸಿದ ಪುತ್ತೂರು ನ್ಯಾಯಾಧೀಶರು

2016ರಲ್ಲಿ ಪುತ್ತೂರು ತಾಲೂಕಿನ ಕೋಣಾಲೆ ಗ್ರಾಮದ ಗೌರ್ಲೆ ಎಂಬಲ್ಲಿ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಜೀಪು ಅಪಘಾತವಾಗಿ ಆರು ಮಂದಿ ಗಂಭೀರ ಗಾಯಗೊಂಡು ಓರ್ವ ಮೃತ ಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ಮೂಲತಃ ತಮಿಳುನಾಡು ನಿವಾಸಿ ಪ್ರಕಾಶ್ ಎಂಬಾತನಿಗೆ ಪುತ್ತೂರು ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಎಚ್ ಆರ್ ಶಿವಣ್ಣ ಫೆ 28 ರಂದು ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದ್ದಾರೆ.

ದಂಡ ಪ್ರಕ್ರಿಯೆ ಸಂಹಿತೆ ಕಲಂ 255 (2)ರಂತೆ ಭಾರತೀಯ ದಂಡ ಸಂಹಿತೆ ಕಲಂ 279 ರಡಿಯಲ್ಲಿ 1ಸಾವಿರ ರೂ ದಂಡ ತಪ್ಪಿದಲ್ಲಿ 7 ದಿನಗಳ ಸಾದಾ ಕಾರಾಗ್ರಹ,337 ರಡಿಯಲ್ಲಿ 500 ರೂ ದಂಡ ತಪ್ಪಿದ್ದಲ್ಲಿ 5 ದಿನ ಸಾದಾ ಜೈಲು ಶಿಕ್ಷೆ,338 ರಡಿಯಲ್ಲಿ 1ಸಾವಿರ ದಂಡ ತಪ್ಪಿದಲ್ಲಿ 7 ದಿನಗಳ ಸಾದಾ ಜೈಲು ಶಿಕ್ಷೆ,ಭಾರತೀಯ ಮೋಟಾರು ವಾಹನಗಳ ಕಾಯಿದೆ ಕಲಂ 134(ಎ )ಮತ್ತು (ಬಿ )ಜೊತೆಗೆ 187 ರಡಿಯಲ್ಲಿ 5 ಸಾವಿರ ದಂಡ ತಪ್ಪಿದಲ್ಲಿ 15 ದಿನ ಸಾದಾ ಜೈಲು ಶಿಕ್ಷೆ,ರಸ್ತೆ ಸಾರಿಗೆ ನಿಯಮ 7 ಸಹವಾಚಕ ಕಲಂ 177 ರಡಿಯಲ್ಲಿ 500ರೂ ದಂಡ ತಪ್ಪಿದ್ದಲ್ಲಿ 5ದಿನ ಸಾದಾ ಜೈಲು ಶಿಕ್ಷೆ,304 (ಎ )ರಡಿಯಲ್ಲಿ 1ವರ್ಷ ಸಾಧಾರಣ ಜೈಲು ಶಿಕ್ಷೆ 1 ಸಾವಿರ ದಂಡ ವಿಧಿಸಿ ಆದೇಶಿಸಿದೆ.ಸರಕಾರದ ಪರವಾಗಿ ಎ ಪಿ ಪಿ ಕವಿತಾ ವಾದ ಮಂಡಿಸಿದರು.

ರಾಜ್ಯ