
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಭಕ್ತರ ಗುಂಪಿನಲ್ಲಿದ್ದ ಮಗುವೊಂದು ಹಾವನ್ನು ತುಳಿದು ಸಂಭವಿಸಬೇಕಾಗಿದ್ದ ಅನಾಹುತವನ್ನು ಬೀದಿ ನಾಯಿಯೊಂದು ತಪ್ಪಿಸಿ ರಕ್ಷಿಸಿದ ಘಟನೆ ನಡೆದಿದೆ.

ಆದಿ ಸುಬ್ರಹ್ಮಣ್ಯ ಬಳಿ ಸಾಗುತ್ತಿದ್ದ ತಂಡದಲ್ಲಿ ಮಹಿಳೆಯೊಬ್ಬರು ಚಿಕ್ಕ ಮಗುವನ್ನು ರಸ್ತೆಯಲ್ಲಿ ಬಿಟ್ಟು ಪಕ್ಕದ ಅಂಗಡಿಗೆ ಹಣ್ಣುಕಾಯಿ ಖರೀದಿಸಲು ತೆರಳಿದ್ದರು. ಆಗ ಮಗು ರಸ್ತೆಯ ಬದಿಗೆ ಬಂದಿದ್ದು, ಅದೇ ಸಮಯಕ್ಕೆ ನಾಗರಹಾವೊಂದು ರಸ್ತೆ ದಾಟುತ್ತಿತ್ತು.
ಈ ಸಂದರ್ಭದಲ್ಲಿ ಮಗು ಹಾವನ್ನು ತುಳಿಯುವ ಸಾಧ್ಯತೆಯನ್ನು ಅಲ್ಲಿಯೇ ಮಲಗಿದ್ದ ಬೀದಿ ನಾಯಿ ಕಂಡು ಓಡಿ ಹೋಗಿ ಮಗುವಿಗೆ ಅಡ್ಡ ನಿಂತು ಹಾವನ್ನು ತುಳಿಯದಂತೆ ಹಾಗೂ ಹಾವು ತೆರಳಲು ಅವಕಾಶ ನೀಡಿ ಮಗುವನ್ನು ಅಪತ್ತಿನಿದ ರಕ್ಷಣೆ ಮಾಡಿದೆ.ಈ ಘಟನೆಯ ಪ್ರತ್ಯಕ್ಷದರ್ಶಿಗಳು ಇತರರಿಗೆ ತಿಳಿಸಿದ್ದು ಇದೀಗ ಘಟನೆ ಕುರಿತ ಬರಹ ಸಾಮಾಜಿಕ ಜಾಲಣದಲ್ಲಿ ವೈರಲ್ ಆಗಿದೆ.