
ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲದಲ್ಲಿ ಕೃಷಿ ತೋಟಕ್ಕೆ ಆನೆಗಳ ಹಿಂಡು ಬಂದು ಕೃಷಿ ಹಾನಿಗೊಳಿಸಿರುವುದಾಗಿ ವರದಿಯಾಗಿದೆ.


ಮೇದಿನಡ್ಕ ಕಾಡಿನಿಂದ ಆನೆಗಳು ತೋಟಕ್ಕೆ ನುಗ್ಗಿವೆ. ಪರಿಣಾಮ ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ ಹಾಗೂ ಮೇನಾಲ ರವೀಂದ್ರನಾಥ ರೈಗಳ ತೋಟಕ್ಕೆ ಆನೆಗಳು ಬಂದಿದ್ದು, ಅಡಿಕೆ ಮರಗಳನ್ನು ಬುಡ ಸಮೇತ ಮಗುಚಿ ಹಾಕಿ, ಸಿಗಿದು ಹಾಕಿದ್ದು ಇದರಿಂದಾಗಿ ಕೃಷಿ ಅಪಾರ ಹಾನಿಗೊಂಡಿದೆ. ಪದೇ ಪದೇ ಆನೆ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.